ಯೋಧ ವಿಷ್ಣುಗೆ ಅಂತಿಮ ವಿದಾಯ

18Muragod1
Published on

ಮುರಗೋಡ: ಪಂಜಾಬನ 4ನೇ ಇಂಜಿನಿಯರ್​ ಬಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ವಿಷ್ಣು ಶಿವಪುತ್ರಪ್ಪ ಕಾರಜೋಳ (25) ಅನಾರೋಗ್ಯದಿಂದ ನವ-ದೆಹಲಿ ಸೈನಿಕ ಆಸ್ಪತ್ರೆಯಲ್ಲಿ ಗುರುವಾರ ವೀರಮರಣ ಹೊಂದಿದರು.

ಯೋಧನ ಮರಣದ ಸುದ್ದಿ ಗ್ರಾಮಕ್ಕೆ ತಲುಪುತ್ತಿದ್ದಂತೆ ಗ್ರಾಮ ಶೋಕಸಾಗರದಲ್ಲಿ ಮುಳುಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶುಕ್ರವಾರ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಯೋಧನ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ಯೋಧನ ಅಂತಿಮ ದರ್ಶನ ಪಡೆದರು. ಬಳಿಕ ಗ್ರಾಮದ ಬೀದಿಗಳಲ್ಲಿ ಯೋಧನ ಪಾರ್ಥಿವ ಶರೀರದ ಶೋಭಾಯಾತ್ರೆ ಹೊರಟು ಸಾರ್ವಜನಿಕ ಸ್ಮಶಾನದಲ್ಲಿ ಹಿಂದು ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆ ವಿಚಾರಕ್ಕೆ ಲಾಠಿಚಾರ್ಜ್​: ಯೋಧ ವಿಷ್ಣು ಶಿವಪುತ್ರಪ್ಪ ಕಾರಜೋಳ ಅವರ ಅಂತ್ಯ ಸಂಸ್ಕಾರ-ವನ್ನು ಸರ್ಕಾರಿ ಜಾಗೆಯಲ್ಲಿ ಮಾಡಬೇಕು ಎಂದು ಗ್ರಾಮಸ್ಥರು ಪೊಲೀಸರಲ್ಲಿ ಮನವಿ ಮಾಡಿದರು. ಈ ಕುರಿತು ಇಲ್ಲಿನ ಪ್ರವಾಸಿ ಮಂದಿರದ ಜಾಗೆಯಲ್ಲಿ ಸ್ವಯಂ ಪ್ರೇರಿತರಾಗಿ

ಮಣ್ಣು ಅಗೆದು ಗುಂಡಿ ತೋಡುತ್ತಿರುವಾಗ ಸ್ಥಳಕ್ಕೆ ಬಂದ ಪೊಲೀಸರು ತಡೆ ಯೊಡ್ಡಿದರು. ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ತೀರ್ವ ವಿಕೋಪಕ್ಕೆ ತಿರುಗಿತು. ಬಳಿಕ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ತಡೆಹಿಡಿದು ಸುಮಾರು 2 ಗಂಟೆ ಕಾಲ ಪಾರ್ಥಿವ ಶರೀರದ ಮುಂದೆ

ಪ್ರತಿಭಟಿಸಿದರು. ಯುವಕರನ್ನು ಚದುರಿಸಲು ಪೊಲೀಸ-ರು ಲಾಠಿಚಾರ್ಜ್​ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net