ಅಂತಿಮ ಕಣದಲ್ಲಿ 17 ಅಭ್ಯರ್ಥಿಗಳು

web
Published on

ಧಾರವಾಡ: ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದ್ದ ಸೋಮವಾರ, ೮ ಜನ ವಾಪಸ್ ಪಡೆದಿದ್ದು, ಅಂತಿಮ ಕಣದಲ್ಲಿ ೧೭ ಅಭ್ಯರ್ಥಿಗಳು ಉಳಿದಿದ್ದಾರೆ.
ವೀಣಾ ಜನಗಿ, ಪ್ರವೀಣಕುಮÁರ ಮÁದರ, ರವಿ ಪಟ್ಟಣಶೆಟ್ಟಿ, ರಿಯÁಜ ಶೇಖ್, ದಿಂಗಾಲೇಶ್ವರ ಮಹಾಸ್ವಾಮಿಗಳು, ಶಿವಾನಂದ ಮುತ್ತಣ್ಣವರ, ರಾಜಶೇಖರಯ್ಯ ಕಂತಿಮಠ ಮತ್ತು ವೆಂಕಟೇಶ ಆಚಾರ್ಯ ಮಣ್ಣೂರ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಪ್ರಲ್ಹಾದ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ವಿನೋದ ಅಸೂಟಿ, ನಾಕಿ ಭಾರತೀಯ ಏಕತಾ ಪಾರ್ಟಿಯ ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾ¬ಲ್ ಮುಕ್ತಿ, ಪ್ರೌಟಿಸ್ಟ್ ಬ್ಲಾಕ್ ಇಂಡಿಯÁ ಪಕ್ಷದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿಯ (ಅಂಬೇಡ್ಕರ್, ಫುಲೆ) ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯೂನಿಟಿ ಸೆಂಟರ್ ಆ-ï ಇಂಡಿಯÁ (ಕಮ್ಯುನಿಸ್ಟ್) ಪಕ್ಷದ ಶರಣಬಸವ ಗೋನವಾರ ಮತ್ತು ಟಿಪ್ಪು ಸುಲ್ತಾನ್ ಪಾರ್ಟಿಯ ಬಂಕಾಪುರ ಶೌಖತ್‌ಅಲಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಎಚ್. ಇಮÁ್ರಪೂರ, ಪ್ರವೀಣ ಹ. ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲಅಹ್ಮದ್ ಡಿ. ಮುಲ್ಲಾ ಮತ್ತು ಎಸ್.ಎಸ್. ಪಾಟೀಲ ಸ್ಪಽðಸಿದ್ದಾರೆ ಎಂದು ಚುನಾವಣಾಽಕಾ ದಿವ್ಯ ಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net