ಸಬಳೂರು ಮೃತರ ಕುಟುಂಬಕ್ಕೆ ಧನಸಹಾಯ

Kdb_Finacial-Help
Published on

ಕಡಬ: ಇತ್ತೀಚೆಗೆ ನಿಧನರಾದ ಕೊಲ ಗ್ರಾಮದ ಕೆರೆಕೋಡಿ ನಿವಾಸಿ ವರದರಾಜ ಶೆಟ್ಟಿ ಅವರ ಕುಟುಂಬಕ್ಕೆ, ಕೊಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗ ಮತ್ತು ಬಿಜೆಪಿ ಸಬಳೂರು ಬೂತ್ ಸಮಿತಿ ಸದಸ್ಯರಿಂದ ಮತ್ತು ದಾನಿಗಳಿಂದ ಸಂಗ್ರಹಿಸಲಾದ ಧನ ಸಹಾಯ ಹಸ್ತಾಂತರಿಸಲಾಯಿತು.

ಕೊಲ ಗ್ರಾ.ಪಂ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಸದಸ್ಯ ಚಿದಾನಂದ ಪಾನ್ಯಾಲು, ಸಬಳೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಸಂಕೇಶ, ಪ್ರಮುಖರಾದ ರವೀಂದ್ರ ಸಂಕೇಶ, ಶ್ರೀರಾಮ ಗೆಳೆಯರ ಬಳಗದ ಪ್ರಮುಖರಾದ ಮೋಹನ್ ಒ.ಕೆ, ದಿನೇಶ್ ಬುಡಲೂರು, ಪುನಿತ್ ಸೀಗೆತ್ತಡಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net