ಮೈಸೂರು ದಸರಾ ಪ್ರಯುಕ್ತ ಚಲನಚಿತ್ರ ನಿರ್ಮಾಣ ಕಾರ್ಯಾಗಾರ

film
Published on


ಮೈಸೂರು: ಮೈಸೂರು ದಸರಾ ಮಹೋತ್ಸವ  ಅಂಗವಾಗಿ, ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಚಿತ್ರ ನಿರ್ಮಾಣ – ಪೂರ್ವ ತಯಾರಿ ಕುರಿತಂತೆ ಚಲನಚಿತ್ರ ನಿರ್ಮಾಣ ಕಾರ್ಯಾಗಾರವನ್ನು ಸೆ. 22, 23 ಹಾಗೂ 24 ರಂದು ರಾಣಿ ಬಹದ್ದೂರು ಸಭಾಂಗಣ, ಮಾನಸ ಗಂಗೋತ್ರಿ, ಹುಣಸೂರು ರಸ್ತೆ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರವನ್ನು ಸೆಪ್ಟೆಂಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಹೆಸರಾಂತ ಕನ್ನಡ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಚಂಪಾಶೆಟ್ಟಿ , ಕೋಡ್ಲು ರಾಮಕೃಷ್ಣ, ಪವನ್ ಕುಮಾರ್, ಪನ್ನಗಾಭರಣ, ಅರವಿಂದ ಕೌಶಿಕ್, ಶಂಕರ್ ಎನ್,ಸಂಡೂರು, ಮಂಸೋರೆ ಅವರು ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು  https://bit.ly/3dxD22D  ಲಿಂಕ್ ಮೂಲಕ ಕಾಣಬರುವ ಗೂಗಲ್ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನೂ ಭರ್ತಿ ಮಾಡಿ, ಕಾರ್ಯಾಗಾರದ ಶುಲ್ಕ 300 ರೂ. ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.  ಮೊದಲು ನೋಂದಣಿ ಮಾಡುವ 200 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.

ಚಲನಚಿತ್ರ ನಿರ್ಮಾಣ ಕಾರ್ಯಾಗಾರ ಪ್ರವೇಶಕ್ಕಾಗಿ ನೊಂದಣಿ ಈಗಾಗಲೇ ಪ್ರಾರಂಭವಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಫ್‌ಲೈನ್ ಮೂಲಕ ಮಾಡಲಾಗುತ್ತಿದೆ. ಆಫ್ ಲೈನ್ ನೊಂದಣಿಗೆ ಯಾವುದಾದರೂ ಅಧಿಕೃತ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net