ನಿಂಬಿಯಾ ಬನಾದ ಮ್ಯಾಗ ಸಿನಿಮಾ ಚಿತ್ರೀಕರಣ

1 ckm 5
ಚಿಕ್ಕಮಗಳೂರು ಸಮೀಪದ ಮಲ್ಲಂದೂರಿನಲ್ಲಿ ನಿಂಬಿಯಾ ಬನಾದ ಮ್ಯಾಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
Published on

ಚಿಕ್ಕಮಗಳೂರು: ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ ನಟನೆಯ ನಿಂಬಿಯಾ ಬನಾದ ಮ್ಯಾಗ ಚಿತ್ರದ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನ ಮಲ್ಲಂದೂರಿನ ಸುತ್ತಮುತ್ತ ನಡೆಯಿತು.

ಎಂ.ಜಿ.ಪಿ ಎಕ್ಸ್. ಎಂಟರ್ ಪ್ರೆÊಸಸ್ ಅಡಿ ವಿ.ಮಾದೇಶ್ ನಿರ್ಮಾಣದ ಚಿತ್ರದಲ್ಲಿ ತಾಯಿ ಮಗನ ಭಾಂದವ್ಯದ ಕಥಾನಕವಿದೆ. ಮಲೆನಾಡಿನ ವಾತಾವರಣ ಆಧಾರಿತ ಸಿನೆಮಾ ಇದಾಗಿದ್ದು, ಈಗಾಗಲೇ ಬೆಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ೧೫ ದಿನಗಳ ಕಾಲ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ಕಡಬ ಅಶೋಕ್ ನಿರ್ದೇಶನವಿದ್ದು, ಸಹ ನಿರ್ದೇಶಕಿಯಾಗಿ ಶ್ವೇತಾ, ಸಿದ್ದು ಛಾಯಾಗ್ರಾಹಣವಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಎಸ್.ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ ಎ.ಎನ್ ಮೂರ್ತಿ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು, ಊರಿನ ಪಟೇಲರ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಹಿರಿಯ ನಟ ರಾಮಕೃಷ್ಣ, ಭವ್ಯ, ಎಂ.ಎಸ್.ಉಮೇಶ್, ಸಂದೀಪ್ ಮಲಾನಿ, ಮೂಗು ಸುರೇಶ್ , ಡಿ.ಕೌಶಿಕ್, ಮುತ್ತುರಾಮ್ ತನುಶ್ರೀ ಸೇರಿದಂತೆ ಹಲವು ಕಲಾವಿದರು 'ನಿಂಬಿಯಾ ಬನಾದ ಮ್ಯಾಗ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net