

ಹುಬ್ಬಳ್ಳಿ: ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟಿ ಥಳಿಸಿದ ಘಟನೆ ಇಲ್ಲಿಯ ಗೋಕುಲ ರಸ್ತೆಯ ಡಾ.ಆರ್.ಎಂ. ಲೋಹಿಯಾ ನಗರದಲ್ಲಿ ನಡೆದಿದೆ.
ಗಣೇಶ ಪೇಟೆ ನಿವಾಸಿ ಲಾಡ್‌ಸಾಬ್ ಎಂಬಾತ ಚಿತ್ರೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಆತ ನಗರದ ಕಟ್ಟಡವೊಂದರ ಬಾರ್‌ಬೆಂಡಿಂಗ್ ಕೆಲಸ ಮಾಡುವ ವೇಳೆ ಈ ಕೆಲಸ ಮಾಡುತ್ತಿದ್ದ. ಪಕ್ಕದ ಮನೆಯ ಬಾತ್‌ರೂಂ ಕಿಟಕಿಯಲ್ಲಿ ಮೊಬೈಲ್ ಫೋನ್ ಇಟ್ಟು ಮಹಿಳೆ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸುವ ವೇಳೆ ಸಿಕ್ಕಿಹಾಕಿಕೊಂಡಿದ್ದಾನೆ. ಮಹಿಳೆಯ ಚೀರಾಟದಿಂದ ತಕ್ಷಣ ಜಮಾಯಿಸಿದ ಸುತ್ತಲಿನವರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಲಾಡ್‌ಸಾಬ್‌ನನ್ನು ಥಳಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.