ಚಿತ್ರ ಸಾಹಿತಿ ಅಶೋಕ್ ನೀಲಾವರ ನಿಧನ

ashok
Published on

ಕುಂದಾಪುರ: ಕುಂದಾಪುರ ಕನ್ನಡ ಪಣ್ಕ್ ಮಕ್ಕಳು ಭಾಗ ಒಂದು ಮತ್ತು ಎರಡರ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ ಅಶೋಕ್ ನೀಲಾವರ (45) ಸೋಮವಾರ ಗೊಕಾಕದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಡುಪಿ ಜಿಲ್ಲೆ ನೀಲಾವರ ನಿವಾಸಿ ಅಶೋಕ್ ನೀಲಾವರ ಬೆಳಗಾವಿ ಗೋಕಾಕಿಗೆ ಬೇಕರಿ ಒಳಾಂಗಣ ವಿನ್ಯಾಸಕ್ಕಾಗಿ ತೆರಳಿದ ಸಂದರ್ಭ ಹೃದಯಾಘಾತ ಆಗಿದ್ದು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡ ಅಶೋಕ್ ಮೃಗಶಿರ, ಕತ್ತಲಕೋಣೆ, ಬೀಟ್ ಚಿತ್ರಗಳ ಒಂದೊಂದು ಹಾಡಿಗೆ ಸಾಹಿತ್ಯ ಬರೆದಿದ್ದರು. ನಿಧನಕ್ಕೆ ನಿರ್ದೇಶಕರಾದ ರವಿ ಬಸ್ರೂರು ಹಾಗೂ ಸಂದೇಶ್ ಶೆಟ್ಟಿ ಆಜ್ರಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net