ಪುತ್ತೂರು: ತುಳು ಸಿನೆಮಾ ಗಬ್ಬರ್ ಸಿಂಗ್ ಮೇ 3ರಂದು ತೆರೆಗೆ ಬರುತ್ತಿದೆ. ದಕ್ಷಿಣ ಕನ್ನಡ, ಉಡುಪಿ,ಶಿವಮೊಗ್ಗ, ಕೊಪ್ಪ, ಕುಶಾಲನಗರ, ಶುಂಠಿಕೊಪ್ಪ ಸೇರಿ 12ಕ್ಕೂ ಅಽಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಕೋವಿಡ್ ಸಮಯದಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದರೂ, ಅಡೆತಡೆಗಳ ನಡುವೆ ಈಗ ಬಿಡುಗಡೆ ಕಾಣುತ್ತಿದೆ. ಸುಮಾರು 1.70ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆಯನ್ನು ನೀಡಲಿದೆ ಎಂದು ಚಲನಚಿತ್ರ ಕಲಾವಿದ ಚಂದ್ರಹಾಸ ಶೆಟ್ಟಿ ಮಾಣಿ ಹೇಳಿದರು.
ಚಿತ್ರದ ಭೂಮಿಕೆಯಲ್ಲಿ ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಡಾಯಸ್ ಇದ್ದು, ಹಿರಿಯ ನಟರಾದ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಗಿರೀಶ್ ಎಂ.ಶೆಟ್ಟಿ, ವೀಣಾ ಎಸ್.ಶೆಟ್ಟಿ, ಉಮೇಶ್ ಮಿಜಾರು, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ರವಿ ರಾಮಕುಂಜ, ಸಂದೀಪ್ ಭಕ್ತ, ಅಥರ್ವ ಪ್ರಕಾಶ್. ಸತೀಶ್ ಪೂಜಾರಿ ಬಾರ್ಕೂರು ಮನರಂಜನೆಯ ಹೂರಣವನ್ನೇ ನೀಡಲಿದ್ದಾರೆ. ಚಂದ್ರಶೇಖರ್ ನಾನಿಲ್ ಮತ್ತು ನಾಗೇಶ್ ಪೂಜಾರಿ ಅರ್ಪಿಸುವ, ಮುತ್ತುಗೋಪಾಲ ಫಿಲ್ಮ್÷್ಸ ನಿರ್ಮಾಣ ಮಾಡಿರುವ, ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಪಕರಾಗಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಚಿತ್ರೀಕರಣಗೊಂಡಿರುವ ಚಿತ್ರವನ್ನು ಜನರು ಪ್ರೀತಿಯಿಂದ ಸ್ವಾಗತಿಸಿ ಪ್ರೋತ್ಸಾಹಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರದೀಪ್ ನಿರ್ದೇಶನದ ಚಿತ್ರಕ್ಕೆ ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ಸಂಗೀತ ಡಾಲ್ವಿನ್ ಕೊಳಲಗಿರಿ, ಹಿನ್ನಲೆ ಸಂಗೀತ ಕಾರ್ತಿಕ್ ಮುಲ್ಕಿ ನೀಡಿದ್ದು, ರವಿ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಪುಷ್ಪರಾಜ್, ಜಯರಾಜ್, ಸಂಕಲನವನ್ನು ಪ್ರಜ್ವಲ್ ಸುವರ್ಣ, ಸಾಹಸ ಅಲ್ಟಿಮೇಟ್ ಶಿವು. ಪಿಆರ್‌ಒ ಜಗನ್ನಾಥ ಶೆಟ್ಟಿ ಬಾಳ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಊರಿನ ಸಾಹುಕಾರನ ಕುಟುಂಬ ಮಾಡುತ್ತಿದ್ದ ಅನಾಚರಗಳನ್ನು ತಡೆಯಲು ಹೋದ ಅಽಕಾರಿಗಳು ಕೊಲೆಯಾಗಿ ಹೋಗುತ್ತಿದ್ದರು. ಊರಿನ ಶಾಸಕಿಗೆ ಸಾಹುಕಾರನಿಗೂ ವೈರತ್ವ ಇದ್ದು, ಇದನ್ನು ಮಟ್ಟಹಾಕಲು ಬಂದ ಪೊಲೀಸ್ ಅಽಕಾರಿ ಸುತ್ತ ಹೆಣೆಯಲಾದ ಕಥೆ ಇದಾಗಿದೆ ಎಂದು ತಿಳಿಸಿದರು.
ನಾಯಕ ನಟ ಶರಣ್ ಶೆಟ್ಟಿ, ನಾಯಕಿ ವೆನ್ಸಿಟಾ ಡಾಯಸ್ ಉಪಸ್ಥಿತರಿದ್ದರು.