ಜೆಎಸ್‌ಎಸ್ ಶಾಲೆಗೆ ಸಿನಿಮೋತ್ಸವ ಪ್ರಶಸ್ತಿ

26 Dwd 1
Published on

ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿನಿಮೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
೨೦೨೩ರ ಮಕ್ಕಳ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ೩೨೩ ಶಾಲೆಗಳು ಐಕೆಎಫ್‌ಎಫ್ ಅಂತಾರಾಷ್ಟಿçÃಯ ಚಿಣ್ಣರ ಸಿನಿಮಾ ಉತ್ಸವ ಆಯೋಜಿಸಿದ್ದವು. ಅವುಗಳಲ್ಲಿ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಸಿನಿಮೋತ್ಸವ ವೀಕ್ಷಿಸಲು ೩೩ ಶಾಲೆಗಳ ೧೦,೦೧೧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತಿ ಹೆಚ್ಚು ವೀಕ್ಷಕರನ್ನು ಹೊಂದಿದ ಸಿನಿಮೋತ್ಸವ ಎಂಬ ಪ್ರಶಸ್ತಿಗೆ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಭಾಜನವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಸಮ್ಮುಖದಲ್ಲಿ ಶಾಲೆಯಲ್ಲಿ ನಡೆಯಿತು. ಮಹಾವೀರ ಉಪಾಧ್ಯೆ, ಪ್ರಾಚಾರ್ಯೆ ಉಷಾ ಸಂತೋಷ್, ನಿರ್ಮಲಾ ಪಾಟೀಲ, ಸಾವಿತ್ರಿ ಗಾತಾಡೆ ಮತ್ತು ಕಮಲಾಕ್ಷಿ ಸಣ್ಣಕ್ಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net