

ವಿಜಯಪುರ: ನಗರ ಹೊರವಲಯದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಸೋಮವಾರ ವಿಶ್ವ ಕಲಾ ದಿನಾಚರಣೆ ನಿಮಿತ್ತ ಚಿತ್ರೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳು ನಿಸರ್ಗದಲ್ಲಿನ ಎಲೆ ಮತ್ತಿತರ ಕಚ್ಚಾ ವಸ್ತು ಬಳಸಿ ಕಲಾಕೃತಿ ಬಿಡಿಸಿದರು.
ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಉದ್ಘಾಟಿಸಿದರು. ಶಾಲೆಯ ಮುಖ್ಯಸ್ಥ ಸಂಗನಗೌಡ ನಾಡಗೌಡ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿ ವೀಕ್ಷಿಸಿ ವಿದ್ಯಾರ್ಥಿಗಳ ಕಲಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ ಸಿಎಒ ಎಚ್. ವೆಂಕಟೇಶ, ಪ್ರಾಚಾಯೆರ್ ವಿಜಯಲಕ್ಷಿ$್ಮ ಪಟ್ಟೇದ, ಉಪ ಪ್ರಾಚಾಯೆರ್ ಶ್ರೀದೇವಿ ಕನ್ನಾಳ, ಮಹೇಶ ಸಂಬಣ್ಣೆ, ಚಿತ್ರಕಲಾ ಶಿಕ ಬಸವರಾಜ ಹಡಪದ, ಶಾರದಾ ತಡಕಲ, ವಿಶ್ವನಾಥ ಕೆಂಬಾವಿ, ಪ್ರಭು ಮುದ್ದೇಬಿಹಾಳ, ಅಶ್ವಿನಿ ಅನಂತಪುರ, ವಿದ್ಯಾರ್ಥಿಗಳು, ಶಿೇತರ ಸಿಬ್ಬಂದಿ ಮತ್ತಿತರರಿದ್ದರು.