ಕಲೆಯ ಸಿದ್ಧಿಗೆ ಸಾಧನೆ ಅಗತ್ಯ

film
Published on

ಚನ್ನರಾಯಪಟ್ಟಣ: ಕಲೆಗೆ ತನ್ನದೇ ಆದ ಮೌಲ್ಯವಿದ್ದು, ಅದನ್ನು ನಮ್ಮದಾಗಿಸಿಕೊಳ್ಳಲು ಸಾಧನೆ ಮಾಡಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದಲ್ಲಿ ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಮಂಚೇನಹಳ್ಳಿ ಯುವ ಪ್ರತಿಭೆ ಸಚಿನ್ ಎಂ.ಜಯಸಿಂಹ ಅಭಿನಯಿಸಿರುವ ‘ಇತ್ಯಾದಿ’ ಚಲನಚಿತ್ರವನ್ನು ಮಂಗಳವಾರ ವೀಕ್ಷಿಸಿ, ಚಿತ್ರತಂಡಕ್ಕೆ ಅಭಿನಂದಿಸಿ ಅವರು ಮಾತನಾಡಿದರು.
ಕಲೆಯು ಕಲಾವಿದನನ್ನು ಕೈಬೀಸಿ ಕರೆಯುತ್ತದೆ. ಕ್ರಿಯಾಶೀಲತೆಯು ಕಲಾವಿದರಲ್ಲಿ ಮತ್ತು ರಸಿಕರಲ್ಲಿ ಉತ್ತಮ ಭಾವನೆ ತುಂಬುವುದರ ಜತೆಗೆ ಜನಮಾನಸದ ಮೇಲೆ ಪ್ರಭಾವ ಬೀರುತ್ತದೆ ಎಂದರು. ಸಿನಿಮಾರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಪ್ರತಿಭೆಗಳು ಹೊರಹೊಮ್ಮುತ್ತಿವೆ. ಕಲೆಗೆ ಸೀಮಿತ ಪರಿಧಿ ಇಲ್ಲ. ಹೊಸದನ್ನು ಸಿದ್ಧಿಸಿಕೊಳ್ಳುವ, ಸಾಧಿಸುವ ಛಲ ತಂಡಕ್ಕೆ ಹೆಚ್ಚಾಗಲಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಳ್ಳಿ ಮಂಜುನಾಥ, ಮುಖಂಡರಾದ ರಂಗೇಗೌಡ, ಮಂಜೇಗೌಡ, ನಂಜೇಗೌಡ, ಲಕ್ಷ್ಮಮ್ಮ, ಪ್ರೇಮಾ, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net