ತುಂಬಿ ಹರಿದ ಶಿವನಯ್ಯನ ಹಳ್ಳ

Harapanahalli Rain
ಹಲುವಾಗಲು-ಗರ್ಭಗುಡಿ ಸಂಪರ್ಕ ರಸ್ತೆ ಮೇಲೆ ಹರಿದ ಶಿವನಯ್ಯನ ಹಳ್ಳದ ನೀರಿನಲ್ಲಿಯೇ ಸವಾರರು ಸಂಚರಿಸಿದರು.
Published on

ಹರಪನಹಳ್ಳಿ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಆಗುತ್ತಿದ್ದು, ನದಿಪಾತ್ರದಲ್ಲಿರುವ ಜಮೀನುಗಳತ್ತ ನುಗ್ಗಿ ಬರುತ್ತಿದೆ.

ನೀರಿನ ಹರಿವು ಹೆಚ್ಚಿದ್ದರಿಂದ ಹಲುವಾಗಲು-ಗರ್ಭಗುಡಿ ಗ್ರಾಮದ ನಡುವೆ ಹರಿದಿರುವ ಶಿವನಯ್ಯನ ಹಳ್ಳ ತುಂಬಿ ರಸ್ತೆ ಮುಳುಗಡೆಯಾಗಿದೆ. ಇದರ ನಡುವೆಯೇ ವಾಹನ ಸವಾರರು ಸಂಚರಿಸಬೇಕಾಯಿತು.

ತಾವರಗುಂದಿ, ನಿಟ್ಟೂರು, ನಿಟ್ಟೂರು ಬಸಾಪುರ, ಹಲುವಾಗಲು, ಗರ್ಭಗುಡಿ ವ್ಯಾಪ್ತಿಯಲ್ಲಿ ನದಿಯು ಮೈದುಂಬಿ ಹರಿಯುತ್ತಿದೆ. ನಿಟ್ಟೂರಿನಲ್ಲಿ ರೈತರ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net