ತುಂಬಿದ ಕೆರವಾಡ ಕೆರೆ

Kerwad Lake
Published on

ದಾಂಡೇಲಿ: ಸಮೀಪದ ಕೆರವಾಡ ಕೆರೆ ಸಂಪೂರ್ಣವಾಗಿ ತುಂಬಿದ್ದು, ಕೋಡಿ ಹರಿಯುವ ಭೀತಿ ಗ್ರಾಮಸ್ಥರಲ್ಲಿ ಉಂಟಾಗಿತ್ತು.

ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ದಾಂಡೇಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭಾನುವಾರ ಸಂಜೆ ಸ್ಥಳಕ್ಕೆ ಧಾವಿಸಿ ಜೆಸಿಬಿ ಬಳಸಿ ಕಾಲುವೆಯನ್ನು ಅಗಲಿಕರಣಗೊಳಿಸಿ ಹೆಚ್ಚಿನ ನೀರನ್ನು ಹೊರಬಿಡಲು ಕ್ರಮ ಕೈಗೊಂಡಿದ್ದಾರೆ.

ಗ್ರಾ.ಪಂ. ಸದಸ್ಯರಾದ ಸುಬಾಸ ಬೋವಿವಡ್ಡರ, ನಾಗರತ್ನಾ, ನೂರಜಾನ ನಧಾಪ್, ಕಂದಾಯ ಅಧಿಕಾರಿ ರಾಘವೇಂದ್ರ ಪಾಟೀಲ, ಪಿ.ಡಿ.ಒ ಸಂತೋಷ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net