ಭಾರೀ ಮಳೆಗೆ ಅಪಾರ ಹಾನಿ

chn
Published on

ಚನ್ನಗಿರಿ: ತಾಲೂಕಿನ ವಿವಿಧೆಡೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಅಪಾರ ನಷ್ಟ ಸಂಭವಿಸಿದೆ. ತಾಲೂಕಿನಲ್ಲಿ 4 ಮನೆಗಳು ಭಾಗಶಃ ಬಿದ್ದಿದ್ದು, ಕೆಲವೆಡೆ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ, ಅಂದಾಜು 4 ಲಕ್ಷ ರೂ. ನಷ್ಟವಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ಬುಧವಾರ ತಿಳಿಸಿದರು.

ತಾಲೂಕಿನ ಮಂಗೇನಹಳ್ಳಿ, ಸಂತೇಬೆನ್ನೂರು, ಚಿಕ್ಕೂಡ ಹಾಗೂ ಹೊದಿಗೆರೆ ಗ್ರಾಮಗಳಲ್ಲಿ ತಲಾ ಒಂದು ಮನೆ ಭಾಗಶಃ ಬಿದ್ದಿದೆ. ಪಟ್ಟಣದ ಹಿರೇಹಳ್ಳ ತುಂಬಿದ್ದು, ಇಲ್ಲಿನ ಕೃಷಿ ಇಲಾಖೆ ಕಚೇರಿಗೂ ನೀರು ನುಗ್ಗಿತ್ತು. ಬೆಳಗ್ಗೆ ಕಾರ್ಮಿಕರು ಸ್ವಚ್ಛ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ, ಮನೆ ಕಳೆದುಕೊಂಡವರ ಮನೆಗಳಿಗೆ ಹೋಗಿ ಸಾಂತ್ವನವನ್ನು ಹೇಳುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ. ಎಲ್ಲರಿಗೂ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಮಳೆ ವರದಿ: ಚನ್ನಗಿರಿ 29.4 ಮಿಮೀ., ದೇವರಹಳ್ಳಿ 46.2 ಮಿಮೀ., ಕತ್ತಲಗೆರೆ 18.1 ಮಿಮೀ., ತ್ಯಾವಣಗಿ 9.2 ಮಿಮೀ., ಬಸವಾಪಟ್ಟಣ 15.4, ಜೋಳದಾಳು 11.0 ಮಿಮೀ, ಸಂತೇಬೆನ್ನೂರು 49.0 ಮಿಮೀ., ಉಬ್ರಾಣಿ 38.4 ಮಿಮೀ., ಕೆರೆಬಿಳಚಿ 30.4ರಷ್ಟು ಮಳೆ ದಾಖಲಾಗಿದೆ. ಸರಾಸರಿ 247.1 ಮಿಮೀನಷ್ಟು ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net