

ಕಂಪ್ಲಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಅದ್ದೂರಿಯಾಗಿ ನಡೆಯಿತು.
ಇದನ್ನೂ ಓದಿ: ಶ್ರಾವಣಿ ಕಾರ್ಯಕ್ರಮ 19ರಂದು
ಮನೆಗಳಲ್ಲಿ ಮಹಾಲಕ್ಷ್ಮೀ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಸಂಕಲ್ಪದೊಂದಿಗೆ ಅರಿಷಿಣ ಲಕ್ಷ್ಮೀ ಪ್ರತಿಮೆ ಮಾಡಿ, ಕಳಸ ತುಂಬಿಟ್ಟು, ಬೆಳ್ಳಿ ಮುಖವಾಡದೊಂದಿಗೆ ಪುಷ್ಪಾಲಂಕಾರ, ಬಂಗಾರದ ಆಭರಣ ತೊಡಿಸಿ ಅಲಂಕರಿಸಿದ್ದರು.
ಅಭಿಷೇಕ, ಲಕ್ಷ್ಮೀ ಅಷ್ಟೋತ್ತರ, ಮಂಗಳಾರತಿ ಜರುಗಿದವು. ಪೂಜೆಗೆ ಬಂದ ಹೆಣ್ಣುಮಕ್ಕಳಿಗೆ ಉಡಿ ತುಂಬಲಾಯಿತು. ಗೋಧೂಳಿ ಸಮಯದಲ್ಲಿ ಬಾಲಮುತ್ತೈದೆಯರಿಗೆ ಉಡಿ ತುಂಬಿ, ಅರಿಷಿಣ ಕುಂಕುಮ, ಫಲತಾಂಬೂಲದೊಡನೆ ಸತ್ಕರಿಸಲಾಯಿತು.
ವರಮಹಾಲಕ್ಷ್ಮೀ ಪೂಜೆ ನಿಮಿತ್ತ ಪಟ್ಟಣದ ಪೇಟೆಯಲ್ಲಿ ತರಕಾರಿ, ನಾನಾ ದಿನಸಿನ ಹಣ್ಣುಗಳು, ತೆಂಗಿನಕಾಯಿ, ಹೂ, ಬಾಳೆಕಂಬ, ಬಾಳೆದೆಲೆ, ತಳಿರು ತೋರಣ, ಕೆಂಪುವಸ್ತ್ರ ಸೇರಿ ಮಂಗಳದ್ರವ್ಯಗಳ ಮಾರಾಟ ಜೋರಾಗಿತ್ತು. ಹಬ್ಬದ ನಿಮಿತ್ತ ಯಾವುದೇ ವಸ್ತು, ಹಣ ಕೊಡು ಕೊಳ್ಳುವುದನ್ನು ಪಾಲಿಸದಿರುವುದು ಕಂಡು ಬಂತು.