ದಿನೇಶ್ ಕಲ್ಲಹಳ್ಳಿ ವಿರುದ್ಧ ಸುಮೋಟೊ ಕೇಸ್ ದಾಖಲಿಸಲು ಎಚ್​ಡಿ ಕುಮಾರಸ್ವಾಮಿ ಒತ್ತಾಯ

H D Kumaraswamy
H D Kumaraswamy
Published on

ಕೋಲಾರ: ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ. ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಮೊಕದ್ದಮೆ ದಾಖಲಿಸಬೇಕು. ದಿನೇಶ್ ದೂರು ಕೊಟ್ಟಿರುವುದು ಮತ್ತು ಹಿಂಪಡೆಯಲು ನಿರ್ಧರಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಕೇಸ್ ವಾಪಸ್ ಪಡೆಯಲು ಕಾರಣವಾದ ಘಟನೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆ ಹಿನ್ನಲೆಯಲ್ಲಿ ಸರ್ಕಾರವು ಜನರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ ಎಂದರು.

ಸಿಡಿ ವಿಚಾರದಲ್ಲಿ ಸಂತ್ರಸ್ತೆ ಹಾಗೂ ಅವರ ಪರ ಯಾರು ಬಂದಿಲ್ಲದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಸಿಡಿ ಹಿಂದೆ ಕೈವಾಡದ ಬಗ್ಗೆ ಆರೋಪಿಸಿರುವ ಸಚಿವ ಯೋಗೇಶ್ವರ ಈ ವಿಷಯದಲ್ಲಿ ಅನುಭವಸ್ಥರು ಎಂದರು

ಮೂರ್ನಾಲ್ಕು ತಿಂಗಳಿನಿಂದ ನಡೆದ ಘಟನೆಗಳ ಹಿನ್ನಲೆಯಲ್ಲಿ ಸಿಡಿ ವಿಚಾರದಲ್ಲಿ 5 ಕೋಟಿ ರೂಪಾಯಿ ಡೀಲ್ ಆಗಿದೆ ಎಂದು ನಾನು ಹೇಳಿದ್ದೇನೆ. ನನ್ನಲ್ಲಿ ನಿಖರವಾದ ಮಾಹಿತಿ ಇಲ್ಲ, ಕೆಲವರು ಹೇಳಿದ್ದನ್ನು ಉಲ್ಲೇಖಿಸಿದ್ದೇನೆ. ಸಿಡಿ ಬಿಡುಗಡೆಯಿಂದ ಸಚಿವರ ರಾಜಿನಾಮೆ ಉದ್ದೇಶ ಸಫಲವಾಗಿದೆ. ಸಿಡಿ ಬಿಡುಗಡೆಗಾಗಿ ಹಣದ ವ್ಯವಹಾರ ನಡೆಸಿದವರು ಸಫಲವಾಗಿದ್ದಾರೆ ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net