ತಪ್ಪಿತಸ್ಥರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ

11blrp1
Published on

ಬೇಲೂರು: ಅಂಬೇಡ್ಕರ್ ಅವರ ನಿವಾಸದ ಮೇಲೆ ನಡೆದಿರುವ ದಾಳಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಭದ್ರತೆಗೆ ಹಾಕಿರುವ ಸವಾಲು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್ ಹೇಳಿದರು.

ಅಂಬೇಡ್ಕರ್ ಆಧುನಿಕ ಭಾರತದ ನಿರ್ಮಾತೃ, ಇಂತಹ ಮಹಾನ್ ಪುರುಷ ತಾನು ಬದುಕಿದ್ದ ಕಾಲಘಟ್ಟದಲ್ಲಿ ತಾವೇ ವಿನ್ಯಾಸಗೊಳಿಸಿ ಕಟ್ಟಿಸಿದ್ದ ಮನೆ ಇದೀಗ ಮ್ಯೂಸಿಯಂ ಆಗಿ ರೂಪುಗೊಂಡಿತ್ತು. ಈ ಸ್ಥಳವನ್ನು ಬಹು ಸಂಖ್ಯಾತರು ಪವಿತ್ರ ಸ್ಥಳವೆಂದು ಭಾವಿಸಿದ್ದರು. ಇಂತಹ ಪವಿತ್ರ ರಾಜಗೃಹದ ಮೇಲೆ ವಿಕೃತ ಮನಸ್ಸಿನವರು ದಾಳಿಮಾಡಿ ಧ್ವಂಸಗೊಳಿಸಿರುವುದು ಆಘಾತಕಾರಿ ಸಂಗತಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ದುಷ್ಕೃತ್ಯಕ್ಕೆ ಕಾರಣರಾದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ದೇಶದಿಂದಲೇ ಗಡಿಪಾರು ಮಾಡಬೇಕು ಮತ್ತು ಅಂಬೇಡ್ಕರ್ ಹಾಗೂ ರಾಷ್ಟ್ರ ನಾಯಕರ ಪ್ರತಿಮೆ ಹಾಗೂ ಮ್ಯೂಸಿಯಂಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ಪ್ರಕಾಶ್, ಜಿಲ್ಲಾ ಸಂಯೋಜಕ ಡಾ.ರಮೇಶ್, ಜಿಲ್ಲಾ ಕಾರ್ಯದರ್ಶಿ ರಾಜು, ಬಿವಿಎಫ್ ಸಂಯೋಜಕ ಉಮೇಶ್, ಕಚೇರಿ ಕಾರ್ಯದರ್ಶಿ ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net