ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲು

20sgr1
Published on

ಸಾಗರ: ತಾಳಗುಪ್ಪ ಹೋಬಳಿ ಶಿರವಂತೆ ಗ್ರಾಮದ ಹಾವಾಡಿಗರ ಕೇರಿಯವರು ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದ ಬಸವರಾಜ ಗೌಡ ಎಂಬುವವರಿಗೆ ಸೇರಿದ 1.16 ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಈ ಜಮೀನಿಗೆ ಹೊಂದಿಕೊಂಡಂತೆ ಉತ್ತರ ದಿಕ್ಕಿನಲ್ಲಿ ಹಾವಾಡಿಗರ ಕೇರಿ ಇದೆ. ಹಾವಾಡಿಗ ಕೇರಿಯ ಕೆಲವರು ಬಸವರಾಜ ಗೌಡ ಅವರಿಗೆ ನಿರಂತರ ತೊಂದರೆ ಕೊಡುತ್ತ ಬಂದಿದ್ದಾರೆ. ಜತೆಗೆ ಜಮೀನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಜಮೀನು ಅತಿಕ್ರಮ ಸಾಗುವಳಿ ಮಾಡುತ್ತಿದ್ದಾಗ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಾವಾಡಿಗ ಕೇರಿಯ ಕೆಲವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಹಾವಾಡಿಗ ಕೇರಿಯವರು ಜಮೀನಿನ ಮಾಲೀಕ ಮತ್ತು ಅಕ್ಕಪಕ್ಕದವರ ವಿರುದ್ಧ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿಸಿದರು. ವಕೀಲ ಕೆ.ವಿ.ಪ್ರವೀಣ್, ತಾಲೂಕು ಸಂಚಾಲಕ ಕೆ.ರೇವಪ್ಪ ಹೊಸಕೊಪ್ಪ ಮಾತನಾಡಿದರು. ಭರ್ಮಪ್ಪ, ರಮೇಶ ಬಂದಗದ್ದೆ, ಮಂಜುನಾಥ್, ಶೇಖರ್, ಸಂದೇಶ್, ಪೃಥ್ವಿ ಸಾಗರ್, ಪ್ರದೀಪ್, ಇಂದಿರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net