ತಂಗಲು ಅವಕಾಶ ಮಾಡಿಕೊಟ್ಟರೆ ದೂರು ದಾಖಲು

16 kollegal-2
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಮರ್ದಾನೆ ಖೈಬ್ ದರ್ಗಾಕ್ಕೆ ಪ್ರಾರ್ಥನೆಗಾಗಿ ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬರುವವರಿಗೆ ತಂಗಲು ಅವಕಾಶ ಮಾಡಿಕೊಟ್ಟರೆ ಕೊವೀಡ್-19 ಪ್ರಕರಣದಡಿ ದೂರು ದಾಖಲಿಸಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ದರ್ಗಾದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೊರಗಿನವರು ದರ್ಗಾದಲ್ಲಿ ತಂಗಲಿದ್ದಾರೆ ಎಂಬ ಮಾಹಿತಿ ಆಧರಿಸಿ ತಹಸೀಲ್ದಾರ್ ಕೆ.ಕುನಾಲ್, ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್, ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ.ಸಿ.ಅಶೋಕ್ ಸೋಮವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹೊರ ರಾಜ್ಯದಿಂದ ಬಂದವರಿಗೆ ದರ್ಗಾದ ಘೋರಿಯಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬಾರದು ಹಾಗೂ ಅಕ್ಕಪಕ್ಕ ಇರುವ ಕೊಠಡಿಗಳಲ್ಲಿ ರಾತ್ರಿ ತಂಗಲು ಅವಕಾಶ ಮಾಡಿಬಾರದು ಎಂದು ಎಚ್ಚರಿಸಿದರು. ಇದಕ್ಕೆ ಸ್ಪಂದಿಸಿದ ಮುಖಂಡರಾದ ಸರದಾರ್‌ಪಾಷ, ಸಯದ್ ಫಾರುಕ್ ಪಾಷ, ಯೂಸಫ್ ಕಾನೂನು ಪಾಲಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net