

ಹುಬ್ಬಳ್ಳಿ: ಗ್ರಾಹಕರಿಂದ ಆರ್‌ಡಿ ಮತ್ತು ಎಫ್‌ಡಿ, ಲೋನ್ ಕಟ್ಟಲು ಬರುವ ಜನರಿಂದ ಹಣವನ್ನು ತನ್ನ ಫೋನ್‌ಪೇಗೆ ಹಾಕಿಸಿಕೊಂಡು ಸಂಘಕ್ಕೆ 4.96 ಲಕ್ಷ ರೂ. ಕಟ್ಟದೆ ಸ್ವಂತಕ್ಕೆ ಬಳಸಿಕೊಂಡ ಆರೋಪದಡಿ ಇಬ್ಬರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವೆಂಕಟೇಶ ಮತ್ತು ವಿದ್ಯಾ ಎಂಬುವರ ವಿರುದ್ಧ ಕರ್ನಾಟಕ ಸ್ವರಾಜ್ಯ ಮಲ್ಟಿಪರ್ಪೋಸ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ದೂರು ನೀಡಿದೆ. 2023 ಮೇ 11ರಿಂದ 2023 ನವೆಂಬರ್ 30ರವರೆಗೆ ಗ್ರಾಹಕರ ಹಣವನ್ನು ಪೋನ್‌ಪೇಗೆ ಹಾಕಿಸಿಕೊಂಡು ಬಳಸಿಕೊಂಡಿದ್ದಾರೆ. ವೆಂಕಟೇಶ, ಪಿಗ್ಮಿ ರೂಪದಲ್ಲಿ ಹಣ ಸಂಗ್ರಹಿಸಿ ತಾನೇ ಉಪಯೋಗಿಸಿಕೊಂಡಿದ್ದಾನೆ. ಬ್ಯಾಂಕ್‌ಗೆ ಒಟ್ಟು 4,96,960 ರೂ. ಕಟ್ಟದೆ ಮೋಸ ಮಾಡಿದ್ದಾರೆ ಎಂದು ಸಂಘದ ನೌಕರರ ಆಕಾಶ ನಾಯಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.