ಪ. ಮಲ್ಲೇಶ್ ವಿರುದ್ಧ ದೂರು ದಾಖಲು

Pa. Mallesh
Published on

ಮೈಸೂರು: ಬ್ರಾಹ್ಮಣರ ಮತ್ತು ಬ್ರಾಹ್ಮಣಿಕೆ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪ ಮತ್ತು ಅಶ್ಲೀಲವಾಗಿ ಚಿಂತಕ ಪ. ಮಲ್ಲೇಶ್ ಮಾತನಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ದೂರು ದಾಖಲಿಸಲಾಯಿತು.


ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಪ. ಮಲ್ಲೇಶ್ ಅವರು ವೇದ ಹಾಗೂ ಉಪನಿಷತ್ತುಗಳ ಬಗ್ಗೆ ಲಘುವಾಗಿ ಮಾತನಾಡಿ, ಮಠಾಧೀಶರನ್ನು ಅವಹೇಳನ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು, ಜಾತಿನಿಂದನೆ ಸೇರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಿಚಾರವನ್ನು ಸೇರಿಸಿ 153ಎ, 295, 295ಎ ಕಲಂನ ಅಡಿ ದೂರು ದಾಖಲಿಸಲು ಕೋರಲಾಗಿದೆ.

ಧಾರ್ಮಿಕ ಮುಖಂಡರಾದ ಡಾ.ಭಾನುಪ್ರಕಾಶ್ ಶರ್ಮ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ವಿಪ್ರ ಮುಖಂಡರಾದ ಎಚ್.ವಿ. ರಾಜೀವ್, ಡಿ.ಟಿ. ಪ್ರಕಾಶ್, ಆದರ್ಶ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್, ಎಸ್. ಭಾಷ್ಯಂ, ಸುಧೀಂದ್ರ, ಕೆ.ಆರ್. ಸತ್ಯನಾರಾಯಣ್ ಸೇರಿದಂತೆ ಮತ್ತಿತರರು ಒಟ್ಟಾಗಿ ದೂರು ನೀಡಿದ್ದಾರೆ.

ಪ.ಮಲ್ಲೇಶ್ ವಿರುದ್ಧ ಜಾತಿ ನಿಂದನೆ ದೂರು ನೀಡಲಾಗಿದೆ. ಶುಕ್ರವಾರ ಎ್ಐಆರ್ ದಾಖಲು ಮಾಡುತ್ತೇವೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಈ ಸಂಬಂಧ ನ. 21ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ.ಡಿ.ಟಿ.ಪ್ರಕಾಶ್, ಅಧ್ಯಕ್ಷ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net