

ಗುತ್ತಲ: ಬಡ್ಡಿ ಸಾಲ ವಸೂಲಿಗಾಗಿ ವ್ಯಕ್ತಿಯೊಬ್ಬನಿಗೆ ಕಿರುಕುಳ ನೀಡಿದ ಆರೋಪದಡಿ ಇಬ್ಬರು ಆರೋಪಿಗಳ ವಿರುದ್ಧ ಇಲ್ಲಿಯ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಪ್ಪ ಶೇಖಪ್ಪ ಬಾಕಿರ್ ಹಾಗೂ ಬ್ರೇಂಜಾಮನ್ ಮೈಕಲ್ ರಾಬಿನ್ ಬೀರನೂರ ಎಂಬುವರ ವಿರುದ್ಧ ದೂರು ದಾಖಲಾಗಿರುವುದು.
ಇವರು ವಿರುದ್ಧ ಬಟ್ಟೆ ವ್ಯಾಪಾರಿ ಶ್ರೀಕಾಂತ ವಿಷ್ಣುರಾವ್ ತೇಲ್ಕಾರ ಎಂಬುವರು ದೂರು ದಾಖಲಿಸಿದ್ದಾರೆ. ರಾಜಪ್ಪ ಎಂಬುವನಿಂದ 2023ರಲ್ಲಿ 1.50 ಲಕ್ಷ ರೂ. ಸಾಲ ಪಡೆದಿದ್ದು, ಅದಕ್ಕಾಗಿ 2.50 ಲಕ್ಷ ರೂ. ಬಡ್ಡಿ ತುಂಬಿದ್ದೇನೆ. ಅಲ್ಲದೆ ಬ್ರೇಂಜಾಮನ್ಗೆ ಕೂಡ 52 ಸಾವಿರ ರೂ. ಬಡ್ಡಿ ಕೊಟ್ಟಿದ್ದೇನೆ. ಇಬ್ಬರು ನನ್ನಿಂದ ಸಹಿ ಮಾಡಿದ ಖಾಲಿ ಚೆಕ್ಗಳನ್ನು ಪಡೆದುಕೊಂಡು ಈಗ ಹಣಕ್ಕಾಗಿ ಪಿಡಿಸುತ್ತಿದ್ದಾರೆ ಎಂದು ಶ್ರೀಕಾಂತ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.