

ಕಂಪ್ಲಿ: ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಎಸ್.ಚಂದ್ರಶೇಖರಗೌಡ ಮಾತನಾಡಿ, ಲಿಂಗಾಯತರ ಹೋರಾಟ ಹತ್ತಿಕ್ಕುವ ದುರುದ್ದೇಶದಿಂದ ಲಾಠಿಚಾರ್ಜ್ ಮೂಲಕ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಾಗಿದ್ದಾರೆ. ಎಡಿಜಿಪಿ ಹಿತೇಂದ್ರ ಸ್ವತಃ ಲಾಠಿ ಹಿಡಿದು ಹೋರಾಟಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರಲ್ಲಿ ಸಿಎಂ ಕ್ಷಮೆ ಕೋರಬೇಕು. ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಅತಿಥಿಗೃಹದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಎಚ್.ಟಿ.ರಾಜಶೇಖರಗೌಡ, ಸಿ.ನಾಗರಾಜಗೌಡ ಶರಣಗೌಡ, ಓಂಕಾರಗೌಡ, ಜಿ.ಅಮರೇಗೌಡ, ಬೂದಾಳ ರವಿ, ಕೆ.ಬಸವರಾಜ, ಕೆ.ಪ್ರಶಾಂತ, ಕೋರಿ ಚನ್ನಬಸವ, ಬಸವನಗೌಡ, ಎಂ.ವೀರೇಶ, ಎ.ಪ್ರಕಾಶ, ಕೆ.ಕಂತೇಗೌಡ ಕೆ.ಶಶಿಧರ ಇತರರಿದ್ದರು.