ಹೋರಾಟಗಾರರು ಆರೋಗ್ಯದತ್ತ ಗಮನ ಹರಿಸಿ

5-kollegal-1,,,,
ಕೊಳ್ಳೇಗಾಲದ ಗುರುಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ರೈತ ಸಂಘ ಮಾಜಿ ಜಿಲ್ಲಾಧ್ಯಕ್ಷ ದಿ.ಮೋಳೆ ಶಿವರಾಂ ಅವರ ನುಡಿನಮನ ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಮಹೇಶ್‌ಪ್ರಭು, ಮಹಾದೇವಪ್ಪ, ಶಿವಮಲ್ಲು, ಗೌಡೇಘೌಡ, ಶೋಭಾ, ಲೋಕೇಶ್ ಇದ್ದರು.
Published on

ಕೊಳ್ಳೇಗಾಲ: ಹೋರಾಟಗಾರರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ರೈತ ಸಂಘ ಮಾಜಿ ಜಿಲ್ಲಾಧ್ಯಕ್ಷ ದಿ.ಮೋಳೆ ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತ ಸಂಘದಲ್ಲಿ ದಿ.ಶಿವರಾಂ ಹಿರಿಯ ರಾಗಿದ್ದರು. ಅವರಿಗಿದ್ದ ಹೃದಯ ಶ್ರೀಮಂತಿಕೆ ನಮಗೆ ಸ್ಫೂರ್ತಿಯಾಗಿದೆ. ಹೋರಾಟಗಾರರು ಬೇಗ ಅಗಲಿದರೆ ಸಮಾಜಕ್ಕೆ ನಷ್ಟವಾಗುತ್ತದೆ. ಶಿವರಾಂ ಅವರು ಆರೋಗ್ಯದ ಮೇಲೆ ಎಚ್ಚರಿಕೆ ವಹಿಸಿದ್ದರೆ ಇನ್ನು ಕೆಲವರ್ಷ ಬದುಕುತ್ತಿದ್ದರು ಅನಿಸುತ್ತದೆ. ಅವರ ಅಗಲಿಕೆಯಿಂದ ರೈತ ಸಂಘ ಹಾಗೂ ಸಮಾಜಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಈ ವೇಳೆ ಸಭೆಯಲ್ಲಿ ನೆರೆದಿದ್ದ ರೈತ ಮುಖಂಡರು ನಿಧನರಾಗಿರುವ ಮುಖಂಡರಾದ ಮೋಳೆ ಶಿವರಾಂ ಹಾಗೂ ಮೈಸೂರಿನ ಅಶ್ವತ್ಥ್‌ನಾರಾಯಣ್ ರಾಜೇ ಅರಸ್ ಅವರಿಗೆ ಕೆಲಕಾಲ ಮೌನ ಆಚರಿಸಿ ಸಂತಾಪ ಸೂಚಿಸಿದರು.

ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಶಿವಪುರ ಮಹಾದೇವಪ್ಪ, ತಾಲೂಕು ಅಧ್ಯಕ್ಷ ಶಿವಮಲ್ಲು, ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ರವಿನಾಯ್ಡು, ದಿ.ಶಿವರಾಂ ಪತ್ನಿ ಶೋಭಾ, ಪುತ್ರ ಲೋಕೇಶ್, ಕುಟುಂಬ ವರ್ಗ ಹಾಗೂ ಇತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net