

ಬೆಳಗಾವಿ: ಕರ್ನಾಟಕ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಜು.19 ರಂದು ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾ ಶಾಖೆಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಎನ್ಪಿಎಸ್ ಬದಲು ಒಪಿಎಸ್ ಆಗುವವರೆಗೂ ಹೋರಾಟ ನಿರಂತರವಾಗಿದೆ. 20 ಲ ಸಾಲ ಸಂದ ಮೇಲಿತ್ತು. ಆದರೀಗ 25 ಕೋಟಿ ಹಣ ಉಳಿತಾಯ ಮಾಡಿದೆ. ಈ ಮೂಲಕ ಸಂಟನೆಯನ್ನು ಒಂದು ಶಕ್ತಿಯಾಗಿಸಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಹೇಳಿದಂತೆ ಈ ಬಾರಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ಗೆಲ್ಲಿಸಿದರೇ, 1 ಕೋಟಿ ವಿಮಾ ಪರಿಹಾರ ಜಾರಿಗೆ ತರಲಾಗುವುದು ಎಂದರು.
ಸಂದ ಕಾರ್ಯ ಶ್ಲಾನೀಯ: ಸಾನ್ನಿಧ್ಯ ವಹಿಸಿದ್ದ ನಿಜಗುಣ ಪ್ರಭು ತೊಂಟದಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ವರ್ತಮಾನದಲ್ಲಿ ದೊಡ್ಡವನಾದರೂ, ಭವಿಷ್ಯದಲ್ಲಿ ಅವರಿಗೆ ಭವಿಷ್ಯವಿರುವುದಿಲ್ಲ. ಭವಿಷ್ಯದಲ್ಲಿಯೂ ನಾಡಿನ ನೌಕರರಿಗೆ ಉಪಯೋಗವಾಗಲಿ ಎಂಬ ಕಾರ್ಯವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂ ಮಾಡುತ್ತಿದೆ. ಒಂದು ಕುಟುಂಬ, ಒಂದು ರಾಷ್ಟ್ರಕ್ಕಾಗಿ ಜೀವ ಮಿಡಿಯುತ್ತದೆ. ಜಗಜ್ಯೋತಿ ಬಸವೇಶ್ವರರು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರು ಹಲವು ಕಷ್ಟ ಅನುಭವಿಸಿದರೂ ಅವರಲ್ಲಿ ಸಮಾಜ ಕಟ್ಟುವ ತುಡಿತದ ಭಾವನೆಯಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ಸಂದ ಬೆಳಗಾವಿ ಜಿಲ್ಲಾಧ್ಯ ಬಸವರಾಜ ರಾಯಪ್ಪಗೋಳ, ಚಿಕ್ಕೋಡಿ ವಿಭಾಗೀಯ ಉಪಾಧ್ಯ ಬಿ.ಎ.ಕುಂಬಾರ, ಕಾರ್ಯದರ್ಶಿ ಶಂಕರ ಗೋಕಾವಿ, ಗಿರಿಗೌಡ ಎಚ್, ವಿ.ವಿ.ಶಿವರುದ್ರಯ್ಯ, ಎಸ್.ಬಸವರಾಜು, ಮಲ್ಲಿಕಾರ್ಜುನ ಬಳ್ಳಾರಿ, ನಾಗರಾಜ ಜುಮ್ಮನ್ನವರ, ಸುರೇಶ ಶೆಡಶ್ಯಾಳ, ಎನ್.ನರಸಿಂಹರಾಜು, ಆರ್.ಮೋಹನ ಕುಮಾರ ಇತರರಿದ್ದರು.