ಸಮಸ್ಯೆ ಪರಿಹಾರಕ್ಕೆ ಒಟ್ಟಾಗಿ ಹೋರಾಡಿ

FotoJet (1)
Published on

ಗುಬ್ಬಿ : ರಾಜ್ಯದ ಪ್ರತಿ ಗ್ರಾಮಗಳಲ್ಲೂ ಸಹ ರೈತ ಸಂವನ್ನು ಕಟ್ಟಬೇಕು. ನಮ್ಮೆಲ್ಲ ಸಮಸ್ಯೆಗಳ ಪರಿಹಾರಕ್ಕೆ ಎಲ್ಲ ರೈತರು ಒಂದಾಗಿ ಹೋರಾಟ ಮಾಡಬೇಕು ಎಂದು ರಾಜ್ಯ ರೈತ ಸಂದ ಜಿಲ್ಲಾ ಅಧ್ಯ ಎ.ಗೋವಿಂದರಾಜು ಹೇಳಿದರು.

ತಾಲೂಕಿನ ಕಡಬ ಹೋಬಳಿಯ ಡಿ.ರಾಂಪುರದಲ್ಲಿ ಡಿ.ರಾಂಪುರದ ಗ್ರಾಮ ಟಕ ಉದ್ಘಾಟಿಸಿ ಮಾತನಾಡಿ, ರೈತರ ಭೂಮಿ, ಟ್ರಾ$್ಯಕ್ಟರ್​ಗಳು ಜಪ್ತಿಯಾಗುತ್ತಿಲ್ಲ ಎಂದರೆ ಅದಕ್ಕೆ ರೈತ ಸಂ ಕಾರಣ. ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ಹಾಗೂ ಮಾರುಕಟ್ಟೆ ಇಲ್ಲದ ಸಂಕಷ್ಟಕ್ಕೆ ಸಿಲುಕಿದೆ. ರೈತರ ಪಂಪ್​ಸೇಟ್​ಗಳಿಗೆ ಕೇಂದ್ರ ಸರ್ಕಾರ ಮೀಟರ್​ ಅಳವಡಿಸಲು ಮುಂದಾಗಿದೆ. ಇದರ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ. ಹಾಗಾಗಿ ಪ್ರತಿ ಗ್ರಾಮದಲ್ಲಿ ಗ್ರಾಮ ಟಕಗಳನ್ನು ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.

ವೈಯಕ್ತಿಕ ರಾಜಕೀಯ ಬಿಟ್ಟು ರೈತರ ಉಳಿವಿಗಾಗಿ ಹಾಗು ಜಿಲ್ಲೆಯ ಉಳಿವಿಗಾಗಿ ಹೇಮಾವತಿ ಲಿಂಕ್​ ಕ್ಯಾನಲ್​ ಹೋರಾಟಕ್ಕೆ ಕೇಂದ್ರ ಸಚಿವ ಹಾಗೂ ಸಂಸದ ವಿ.ಸೋಮಣ್ಣ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬರಬೇಕು. ನಾವು ನಿಮ್ಮ ಜತೆಗಿರುತ್ತೇವೆ ಎಂದರು.

ತಾಲೂಕು ಅಧ್ಯ ವೆಂಕಟೇಗೌಡ ಮಾತನಾಡಿ, ಗುಬ್ಬಿ ತಾಲೂಕಿನ ಬಹುತೇಕ ಭಾಗಗಳಲ್ಲಿ ರೈತ ಸಂದ ಟಕಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದಿಂದ ಹೇಮಾವತಿ ಲಿಂಕ್​ ಕೆನಾಲ್​ ರಾಮನಗರಕ್ಕೆ ತೆಗೆದುಕೊಂಡು ಹೋಗುವುದನ್ನ ನಾವೆಲ್ಲರೂ ತೀವ್ರವಾಗಿ ವಿರೋಧಿಸಬೇಕು. ಇಲ್ಲದ್ದಿದ್ದರೆ ಇದು ನಮ್ಮ ಪಾಲಿಗೆ ಮರಣ ಶಾಸನವಾಗುತ್ತದೆ ಎಂದು ತಿಳಿಸಿದರು.

ರೈತ ಸಂದ ಸದಸ್ಯ ಆರ್​.ಡಿ.ಸತೀಶ್​ ಮಾತನಾಡಿ, ನಮ್ಮ ಗ್ರಾಮದಲ್ಲಿ ರೈತ ಸಂದ ಟಕ ಆರಂಭಿಸಿ 40 ಜನ ಸದಸ್ಯರಾಗಿದ್ದೇವೆ. ಮುಂದಿನ ದಿನದಲ್ಲಿ ಮತ್ತಷ್ಟು ಜನರ ಸಂಖ್ಯೆಯನ್ನು ಹೆಚ್ಚಿಸಿ ಈ ಭಾಗದಲ್ಲೆ ಲಿಂಕ್​ ಕೆನಾಲ್​ ಮಾಡಲು ಹೊರಟಿರುವಂತಹ ಸರ್ಕಾರಕ್ಕೆ ನಾವೆಲ್ಲರೂ ಒಟ್ಟಾಗಿ ನಿಂತು ಚಾಟಿ ಬೀಸುತ್ತವೆ ಎಂದು ತಿಳಿಸಿದರು.

ಗುಬ್ಬಿ ತಾಲೂಕಿನ ಕೊಣನಕೆರೆ ಕೆ.ರಾಂಪುರ, ಬೆಣ್ಣೂರು ಡಿ.ರಾಂಪುರದಲ್ಲಿಯೂ ಸಹ ಟಕ ಸ್ಥಾಪನೆ ಮಾಡಲಾಯಿತು. ಕಾರ್ಯದರ್ಶಿ ಸಿ.ಜಿ.ಲೋಕೇಶ್​, ಸಂದ ಮಂಜುನಾಥ್​, ಗುರುಚನ್ನಬಸವಣ್ಣ, ಯತೀಶ್​, ಕನ್ನಿಗಪ್ಪ, ಸತ್ತಿಗಪ್ಪ ಶಿವಣ್ಣ ಮಾಹದೇವಣ್ಣ, ಬೋರೇಗೌಡ, ಈಶಣ್ಣ, ಪ್ರಕಾಶ್​, ನಟರಾಜು, ಸತೀಶ್​, ಶಂಕರ್​, ಉಮೇಶ್​, ಸದಾನಂದ, ಅಭಿಷೇಕ್​, ಪುನೀತ್​,ಚಂದ್ರಶೇಖರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net