ಪ್ರವಾಸ ಖರ್ಚಿನ ವಿಷಯವಾಗಿ ಹೊಡೆದಾಟ

crime
Published on

ಹುಬ್ಬಳ್ಳಿ: ಗೋವಾಕ್ಕೆ ಪ್ರವಾಸ ತೆರಳಲು ಖರ್ಚು ಭರಿಸುವ ವಿಷಯಕ್ಕಾಗಿ ಹೊಡೆದಾಟ ಇಲ್ಲಿಯ ಕಾರವಾರ ರಸ್ತೆಯ ಬಾರೊಂದರಲ್ಲಿ ನಡೆದಿದೆ.

ಶಂಕರ ದೊಡ್ಡಮನಿ ಅಲಿಯಾಸ್ ಕೋಳಿ ಶಂಕರ, ದಾವಲ ಕೂಡಿಕೊಂಡು ಗೋವಾಕ್ಕೆ ಪ್ರವಾಸ ತೆರಳುವ ವಿಚಾರ ಮಾಡುತ್ತಿದ್ದೆವು. ಎಲ್ಲರೂ ಹಣ ಹಂಚಿಕೊಂಡು ಹೋಗೋಣ ಎಂದು ಹೇಳಿದೆ. ಎಲ್ಲ ಹಣ ನೀನೇ ಖರ್ಚು ಮಾಡಬೇಕು. ಇಲ್ಲವೆಂದರೆ ನೋಡು ಎಂದು ಶಂಕರ ನನಗೆ ಅವಾಚ್ಯವಾಗಿ ನಿಂದಿಸಿ ಧಮಕಿ ಹಾಕಿದ್ದಲ್ಲದ ಸೋಡಾ ಗ್ಲಾಸ್‌ನಿಂದ ನನ್ನ ತಲೆಗೆ ಹೊಡೆದಿದ್ದಾನೆ ಎಂದು ಪವನ ಹೊಸೂರ ಎಂಬಾತ ಹಳೇ ಹುಬ್ಬಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net