

ನೆಲಮಂಗಲ : ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ವೃಷಭಾವತಿ ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ಚೌಧರಿ ಎಚ್ಚರಿಕೆ ನೀಡಿದರು.
ವೃಷಭಾವತಿ ಯೋಜನೆ ವಿರೋಧಿಸಿ ಟಿ.ಬೇಗೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ನಿಂದ ಸೋಮವಾರ ಅಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ವೃಷಭಾವತಿ ಯೋಜನೆ ಕುರಿತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಎರಡೂ ಜಿಲ್ಲೆಯಲ್ಲಿ ಬೆಳೆದ ತರಕಾರಿ ಹಾಗೂ ಸೊಪ್ಪನ್ನು ತೆಗೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ಈ ಹಿಂದೆ ಸರ್ಕಾರವೇ ಈ ಯೋಜನೆ ಕೈ ಬಿಟ್ಟಿತ್ತು. ಆದರೆ ೇತ್ರದ ಶಾಸಕರು 1800ಕೋಟಿ ರೂಪಾಯಿ ವೆಚ್ಚದಲ್ಲಿ ವೃಷಭಾವತಿ ಯೋಜನೆಗೆ ಉಪ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ಮಾಡಿಸಿ ತಾಲೂಕಿನ ಕೆರೆಗಳಿಗೆ ಕೊಳಚೆ ನೀರು ಹರಿಸಲು ಮುಂದಾಗಿದ್ದಾರೆ ಎಂದರು. ತಾಲೂಕಿನ ಜನರ ವಿರೋಧ ನಡುವೇ ಶಾಸಕರು ಯಾವ ಕಾರಣಕ್ಕೆ ಈ ಯೋಜನೆ ತರುತ್ತಿದ್ದಾರೋ ಗೊತ್ತಿಲ್ಲ. ಶಾಸಕ ಎನ್.ಶ್ರೀನಿವಾಸ್ ಅವರು ಪಕ್ಕದ ಬೆಂಗಳೂರು ದಣ ತಾಲೂಕಿನವರು. ಈ ಯೋಜನೆ ನೀರಿನಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ೇತ್ರದ ಜನರಿಗೆ ವೃಷಭಾವತಿ ಯೋಜನೆ ಬಗ್ಗೆ ಶಾಸಕರು ತಪ್ಪು ಸಂದೇಶ ನೀಡುತ್ತಿದ್ದಾರೆ. ವೃಷಭಾವತಿ ಯೋಜನೆ ನೀರು ಕೊಳಚೆ ನೀರು ಎಂದು ಸಾಕಷ್ಟು ಮಂದಿ ರಾಜಕೀಯ ವ್ಯಕ್ತಿಗಳು ಹಾಗೂ ಕಾಂಗ್ರೆಸ್ ಪಕ್ಷದವರೇ ತಿಳಿಸಿದ್ದಾರೆ. ಆದ್ದರಿಂದ ಕೂಡಲೇ ವೃಷಭಾವತಿ ಯೋಜನೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆ ಮಂಜುಳಾಸುರೇಶ್, ಪ್ರಧಾನ ಕಾರ್ಯದರ್ಶಿ ಶೀಲಾ, ಮುಖಂಡ ಸಪ್ತಗಿರಿಶಂಕರ್ ನಾಯಕ್, ಪುಟ್ಟಣ್ಣ, ವರದನಾರಾಯಣ್, ಅರುಣ್ಗೌಡ, ಹ್ಯಾಡಾಳ್ಹರ್ಷ, ಉಮೇಶ್ ಉಪಸ್ಥಿತರಿದ್ದರು.
ಕುತಂತ್ರದ ಕೆಲಸ : ವೃಷಭಾವತಿ ಯೋಜನೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ನಿಂದ ಸಭೆ ಮಾಡುತ್ತಿದ್ದ ವೇಳೆ ಶಾಸಕ ಎನ್.ಶ್ರೀನಿವಾಸ್ ಅವರು ಪೊಲೀಸರನ್ನು ಬಿಟ್ಟು ಸಭೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಶಾಸಕರ ಕೈಗೊಂಬೆಯಂತೆ ಕುಣಿಯುತ್ತಿದ್ದಾರೆ. ಶಾಸಕರು ಈ ರೀತಿಯ ಕುತಂತ್ರದ ಕೆಲಸ ಹಾಗೂ ಪೊಲೀಸರ ದಬ್ಬಾಳಿಕೆಗೆ ಎನ್ಡಿಎ ಮುಖಂಡರು ಎಂದಿಗೂ ಜಗ್ಗುವುದಿಲ್ಲ ಎಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್ಚೌಧರಿ ತಿಳಿಸಿದರು.
ತಾಲೂಕಿನ ಬಹುತೇಕ ಮಂದಿ ಕೃಷಿ ನಂಬಿ ಜೀವನ ಮಾಡುತ್ತಿದ್ದಾರೆ. ವೃಷಭಾವತಿ ಯೋಜನೆ ನೀರು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರಲ್ಲ. ಈ ಕೊಳಚೆ ನೀರಿನಿಂದ ಅರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜತೆಗೆ ತಾಲೂಕಿನ ಸಾರ್ವಜನಿಕರಿಗೆ, ರೈತರಿಗೆ ಜಾನುವಾರುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. > ಇ.ಕೃಷ್ಣಪ್ಪ ವಿಧಾನ ಪರಿಷತ್ ಮಾಜಿ ಸದಸ್ಯ