ಬಟ್ಟೆ ಅಂಗಡಿಯಲ್ಲಿ ಜಗಳ, ಮಾಲೀಕ, ಗ್ರಾಹಕಗೆ ಗಾಯ

man thrashed
Published on

ಕಾಸರಗೋಡು: ಕುಂಬಳೆ ಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿ ವಿಷಯದಲ್ಲಿ ನಡೆದ ಘರ್ಷಣೆಯಲ್ಲಿ ಅಂಗಡಿ ಮಾಲೀಕ ಮತ್ತು ಗ್ರಾಹಕ ಗಾಯಗೊಂಡಿದ್ದಾರೆ. ಬಟ್ಟೆ ಅಂಗಡಿ ಮಾಲೀಕ ಕುಂಬಳೆಯ ಅಬ್ದುಲ್ಲ ಹಾಗೂ ಗ್ರಾಹಕ ಆರಿಕ್ಕಾಡಿ ಕಡವತ್ ನಿವಾಸಿ ಸಫ್ವಾನ್ ಗಾಯಾಳುಗಳು. ಸಫ್ವಾನ್ ತಾಯಿಯೊಂದಿಗೆ ಬಟ್ಟೆ ಖರೀದಿಗೆ ಅಂಗಡಿಗೆ ಆಗಮಿಸಿದ್ದು, ಈ ಸಂದರ್ಭ ತನ್ನ ಇಚ್ಛೆಗೆ ತಕ್ಕ ಬಟ್ಟೆ ಲಭ್ಯವಾಗದಿರುವುದರಿಂದ ಅಂಗಡಿ ಮಾಲೀಕರೊಂದಿಗೆ ವಾಗ್ವಾದ ಉಂಟಾಗಿತ್ತೆನ್ನಲಾಗಿದೆ. ನಂತರ ಅಂಗಡಿಯಿಂದ ವಾಪಸಾದ ಇವರು, ಇಬ್ಬರು ಸ್ನೇಹಿತರೊಂದಿಗೆ ಮತ್ತೆ ಅಂಗಡಿಗೆ ಆಗಮಿಸಿ ಅಂಗಡಿ ಮಾಲೀಕನನ್ನು ಥಳಿಸಿದ್ದಾರೆ. ಹೊಡೆದಾಟ ಸಂದರ್ಭ ಇಬ್ಬರಿಗೂ ಗಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net