ರೈಲು ಮಾರ್ಗಕ್ಕಾಗಿ ಪತ್ರ ಚಳವಳಿ

23MDG1 PRATIBHATANE
Published on

ವಿಜಯವಾಣಿ ಸುದ್ದಿಜಾಲ ಮುಂಡರಗಿ

ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಗದಗ&ಹರಪನಹಳ್ಳಿ ರೈಲು ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಹಾಗೂ ವಿವಿಧ ಸಂಟನೆಗಳ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಅಂಚೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ಪ್ರತಿಭಟನೆ ನಡೆಸಿ ಅಂಚೆ ಕಚೇರಿ ವ್ಯವಸ್ಥಾಪಕ ಹಾಲೇಶ ವಾಮಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಗದಗ&ಹರಪನಹಳ್ಳಿ ರೈಲು ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನವಲಗುಂದ ಮಾತನಾಡಿ, ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು. ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಅನುಷ್ಠಾನವನ್ನು ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್​ ಶಾ, ರೈಲ್ವೆ ಸಚಿವ ಅಶ್ವಿನ ವೈಷ್ಣವಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಸಿಎಂ ಸಿದ್ದರಾಮಯ್ಯ, ಗೃಹಮಂತ್ರಿ ಜಿ. ಪರಮೇಶ್ವರ, ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಮತ್ತು ವಿವಿಧ ರೈಲ್ವೆ ಇಲಾಖೆಗಳಿಗೆ ಹಾಗೂ ಬೋರ್ಡ್​ಗಳಿಗೆ ಅಂಚೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ ಎಂದರು.

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ, ಗದಗ&ಹರಪನಹಳ್ಳಿ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎನ್ನುವ ನಮ್ಮ ಈ ಬೇಡಿಕೆ ಡಿ. 9 ರೊಳಗೆ ಈಡೇರಿಸದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕ ಪ್ರದೇಶ ರೈತ ಸಂ ಅಧ್ಯಕ್ಷ ವಿ.ಎಸ್​.ಟ್ಟಿ, ಮುಂಡರಗಿ ವಿಧಾನಸಭಾ ಹೋರಾಟ ಸಮಿತಿ ಅಧ್ಯಕ್ಷ ದೇವಪ್ಪ ಇಟಗಿ, ಕಿಸಾನ ಜಾಗೃತಿ ಸಂದ ಜಿಲ್ಲಾಧ್ಯಕ್ಷ ಧ್ರುವಕುಮಾರ ಹೂಗಾರ, ಯಮನಪ್ಪ ಭಜಂತ್ರಿ, ಬಸಪ್ಪ ವಡ್ಡರ, ಪವನ್​ ಚೋಪ್ರಾ, ಮೈನುದ್ದೀನ ಗರಡಿಮನಿ, ಸುರೇಶ ಕುಂಬಾರ, ಸುಭಾಷ ಕುಂಬಾರ, ನಜೀರ ಹೊಸಪೇಟಿ, ವೀರಭದ್ರಪ್ಪ ಕಬ್ಬಿಣದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net