ನಾಯಿಗಾಗಿ ಯುವಕ ಯುವತಿ ನಡುವೆ ಗಲಾಟೆ

Dog lover
Published on

ಉಡುಪಿ: ಯುವಕ, ಯುವತಿಯರಿಬ್ಬರು ನಾಯಿಗಾಗಿ ಗಲಾಟೆ ಮಾಡಿಕೊಂಡ ಪ್ರಸಂಗ ಉಡುಪಿ ನಗರದ ಅಜ್ಜರಕಾಡು ಪೆಟ್‌ಶಾಪ್ ಬಳಿ ನಡೆದಿದೆ. ಶುಕ್ರವಾರ ಸಾಯಂಕಾಲ ಯುವಕ ಅಜ್ಜರಕಾಡು ಪೆಟ್‌ಶಾಪ್ ಬಳಿ ನಾಯಿಯನ್ನು ಕರೆದುಕೊಂಡು ಬಂದಿದ್ದಾರೆ. ಆಕಸ್ಮಿಕವಾಗಿ ಅದೇ ಸ್ಥಳದಲ್ಲಿ ನಾಯಿಯನ್ನು ಕಂಡ ಯುವತಿಯೊಬ್ಬಳು ಇದು ನನ್ನ ನಾಯಿ, ಏಳೆಂಟು ತಿಂಗಳ ಹಿಂದೆ ನಾಪತ್ತೆಯಾಗಿತ್ತು. ನಿನ್ನ ಬಳಿ ಹೇಗೆ ಬಂತು ಎಂದು ಪ್ರಶ್ನಿಸಿದ್ದಾಳೆ. ಯುವಕ ಸಹ ಇದು ನನ್ನದೇ ನಾಯಿ. ನಿಮ್ಮ ನಾಯಿ ಅಲ್ಲ ಎಂದಿದ್ದಾರೆ. ಕಪ್ಪು ಬಣ್ಣದ ನಾಯಿಗಾಗಿ ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಯುವತಿ ನಾಯಿಯ ಹೆಸರೇಳಿ ಕರೆದಿದ್ದು, ನಾಯಿ ಸಹ ಯುವತಿ ಜತೆ ಆತ್ಮಿಯವಾಗಿ ವರ್ತಿಸಿದೆ. ಬಳಿಕ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರ ಜಗಳ ಬಿಡಿಸಿ, ಮಾತುಕತೆ ಮೂಲಕ ರಾಜಿ ಮಾಡಿಸಿದ್ದಾರೆ. ನಾಯಿ ಯುವತಿಯ ಜತೆಗೆ ಹೋಗಲು ಮನಸ್ಸು ಮಾಡುವ ಮೂಲಕ ಪ್ರಕರಣ ಇತ್ಯರ್ಥ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net