ನ್ಯಾಯಾಲಯದ ಮುಂಭಾಗವೇ ವಕೀಲರ ಹೊಡೆದಾಟ; ಸ್ಥಳಕ್ಕೆ ಪೊಲೀಸರ ಆಗಮನ..

Lawyer F
Published on

ಕೋಲಾರ: ನ್ಯಾಯಾಲಯ ಮುಂಭಾಗವೇ ವಕೀಲರಿಬ್ಬರ ನಡುವೆ ಜಗಳ ನಡೆದಿದ್ದು, ಸಾರ್ವಜನಿಕರು ಒಮ್ಮೆ ದಂಗಾಗಿ ನೋಡುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೋಲಾರ ಜಿಲ್ಲೆಯ ಕೆಜಿಎಫ್​ ನ್ಯಾಯಾಲಯದ ಮುಂಭಾಗ ಈ ಗಲಾಟೆ ನಡೆದಿದೆ.

ವಕೀಲರಾದ ವೆನಿಲ್ಲಾ ಹಾಗೂ ಬಾಬು ಎಂಬವರ ಮಧ್ಯೆ ಇಂದು ಈ ಹೊಡೆದಾಟ ನಡೆದಿದೆ. ಕೆಜಿಎಫ್​ ನ್ಯಾಯಾಲಯದ ಮುಂಭಾಗ ಟೇಬಲ್​-ಕುರ್ಚಿ ಇಟ್ಟುಕೊಂಡು ಕಾನೂನು ನೆರವು ಒದಗಿಸುವ ಇವರು ಇಂದು ಏಕಾಏಕಿ ಕಿತ್ತಾಟಕ್ಕೆ ಮುಂದಾದರು.

ವಕೀಲೆ ವೆನಿಲ್ಲಾ ವಕೀಲ ಬಾಬು ಅವರತ್ತ ಪ್ಲಾಸ್ಟಿಕ್ ಚೇರ್ ಎತ್ತಿ ಎಸೆದಿದ್ದಲ್ಲದೆ, ಕಲ್ಲು ತೂರಿ ಕೂಡ ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ರಾಬರ್ಟ್​ಸನ್​ ಠಾಣೆ ಪೊಲೀಸರು ಧಾವಿಸಿದ್ದು, ಈ ಹೊಡೆದಾಟದ ದೃಶ್ಯವಿರುವ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net