೧೦ ರಂದು ಐದನೇ ವರ್ಷದ ಪಲ್ಲಕ್ಕಿ ಉತ್ಸವ

RAJESH
RAJESH
Published on

ರಾಯಚೂರು ನಗರದ ಶ್ರೀ ವಸಂತ ಮಾರುತಿ ದೇವಸ್ಥಾನದಲ್ಲಿ ಐದನೇ ವರ್ಷದ ಪಲ್ಲಕ್ಕಿ ಉತ್ಸವ ಮತ್ತು ಅಗ್ನಿಕುಂಡ ಕಾರ್ಯಕ್ರಮ -É.೧೦ ರಂದು ನಡೆಯಲಿದೆ ಎಂದು ದೇವಸ್ಥಾನದ ಕಮಿಟಿ ಸದಸ್ಯ ರಾಜೇಶ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ದೇವಸ್ಥಾನದಲ್ಲಿ ನವಗ್ರಹ ಪ್ರತಿಷ್ಠಾಪನೆ, ಹೋಮ ಹವನ, ಶಿವಲಿಂಗ, ನಂದಿ, ಪ್ರತಿಷ್ಠಾಪನೆ, ಬೆಳಿಗ್ಗೆ ೧೧ ಗಂಟೆಗೆ ದ್ವಾದಶ ಜ್ಯೋರ್ತಿಲಿಂಗ ಪಡಿಪೂಜೆ, ಪಂಚಾಮೃತ ಅಭಿಷೇಕ ಕಾರ್ಯಕ್ರ ಮಗಳು ನಡೆಯಲಿವೆ ಎಂದರು.

ಶ್ರೀಕಾಂತ ಮಾತನಾಡಿ ಪ್ರತಿವರ್ಷ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಸಲಾಗುತ್ತಿದೆ ಸಂಜೆ ಪಲ್ಲಕ್ಕಿ ಉತ್ಸವ, ನಂದಿಕೋಲು, ಚಂಡಿಮೇಳ, ಭಾಜ ಬಜಂತ್ರಿಯೊAದಿಗೆ ಮೆರವಣಿಗೆ ನಡೆಯಲಿದೆ.ಬಸವಭಾವಿ ವೃತ್ತದಿಂದ ವಿವಿಧ ರಸ್ತೆಗಳ ಮೂಲಕ ಸಂಚರಿಸಿ ಚಂದ್ರಮೌಳೇಶ್ವರ ವೃತ್ತದ ಮೂಲಕ ಮರಳಿ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಲಿದೆ. ನಂತರ ಅಗ್ನಿಕುಡ ಕಾರ್ಯಕ್ರಮನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಶಿವದೀಕ್ಷೆ ಪಡೆದ ಶಿವಲಿಂಗು, ವೀರೇಶ, ಅರವಿಂದ ಇದ್ದರು.

------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net