

ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಮದ ಬಳಿ ಆಲಮಟ್ಟಿ ಎಡದಂಡೆ ಕಾಲುವೆ ಹತ್ತಿರ ಮುಖ್ಯ ರಸ್ತೆಯಲ್ಲಿ ಕ್ರೂಜರ್ ಪಲ್ಟಿಯಾಗಿ 15 ಜನರು ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವ ಟನೆ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.
ಮುದ್ದೇಬಿಹಾಳದ ಅನೀಲ ವಡ್ಡರ, ಮುದ್ನಾಳದ ವಿಠ್ಠಲ ನಾವಿ, ಮುಧೋಳದ ಮಲ್ಲಿಕಾರ್ಜುನ ಕುಂಬಾರ ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಟನೆಯಲ್ಲಿ ವೀರೇಶ ಕುಂಬಾರ, ಹುಲಗಪ್ಪ ಮಾದರ, ಆನಂದ ಹಿರೇಕುರುಬರ, ವೀರಣ್ಣ ಹೆಬ್ಬಾಳ, ಮುತ್ತು ಹಿರೇಮಠ, ಮಹ್ಮದ್ ಲಾಹೋರಿ, ಪ್ರಶಾಂತ ಕಮತಗಿ, ಮನೋಜ ಪತ್ರಿಮಠ, ಬಸವರಾಜ ಬಿರಾದಾರ, ವಿಠ್ಠಲ ಗೋಕಾಕ, ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಶೋಭಾ ಶಳ್ಳಗಿ ಗಾಯಗೊಂಡವರಾಗಿದ್ದಾರೆ. ಇವರೆಲ್ಲರೂ ಮುದ್ದೇಬಿಹಾಳ, ಚಲಮಿ, ಯರಗಲ್ಲ. ಮುಧೋಳಕ್ಕೆ ಸೇರಿದವರಾಗಿದ್ದಾರೆ.
ಗಾಯಾಳುಗಳೆಲ್ಲರಿಗೂ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ವೆದ್ಯ ಡಾ. ಪರಶುರಾಮ ವಡ್ಡರ ನೇತತ್ವದ ವೆದ್ಯಕಿಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಜೀಪ್ ಪಲ್ಟಿ ಆಗಲು ನಿಖರ ಕಾರಣ ತಣಕ್ಕೆ ತಿಳಿದು ಬಂದಿಲ್ಲ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯರಗಲ್ಲ& ಮದರಿ ಹತ್ತಿರ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಈ ಕ್ರೂಜರ್ ಕರೆದೊಯ್ಯುತ್ತಿತ್ತು. ಟನೆಗೆ ಸಂಬಂಧಿಸಿದಂತೆ ಕಾರ್ಖಾನೆ ಆಡಳಿತ ಮಂಡಳಿ ತಣವೇ ಸ್ಪಂದಿಸಿ ಎಲ್ಲರಿಗೂ ಚಿಕಿತ್ಸೆ ಕೊಡಿಸಲು ಕ್ರಮಕೆಕೊಂಡಿದ್ದಾರೆ.
ಇದಲ್ಲದೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಾದವರ ಚಿಕಿತ್ಸಾ ವೆಚ್ಚ ಭರಿಸಲು ತೀರ್ಮಾನಿಸಿದ್ದಾರೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.