ನೀರು ಪೂರೈಕೆ ಯೋಜನೆ ಮುಂದುವರೆಸಿದ್ರೆ ಉಗ್ರ ಹೋರಾಟ

IMG20250219205604.jpg
Published on

ಬೆಳಗಾವಿ: ಘಟಪ್ರಭಾ ಎಡದಂಡೆ ಭಾಗದ ರೈತರು 75 ವರ್ಷದ ಹಿಂದೆ ಕೆನಾಲ್ ನಿರ್ಮಾಣಕ್ಕೆ ಅತ್ಯಂತ ಕಡಿಮೆ ದರದಲ್ಲಿ ಜಮೀನು ನೀಡಿ, ನೀರಾವರಿ ಸೌಲಭ್ಯಕ್ಕಾಗಿ ಧೂಪದಾಳದಿಂದ ಬೀಳಗಿವರೆಗೆ ಸುಮಾರು 20 ಸಾವಿರ ಪೈಪ್‌ಲೈನ್ ಅಳವಡಿಸಲಾಗಿತ್ತು. ಈಗ ಅನ್ಯ ಉದ್ದೇಶಕ್ಕೆ ಅಧಿಕಾರಿಗಳು ರೈತರ ಪೈಪ್‌ಲೈನ್ ತೆಗೆದು ಹಾಕಲಾಗುತ್ತಿರುವುದು ಖಂಡನೀಯ ಎಂದು ರೈತಪರ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಘಟಪ್ರಭಾ ಎಡದಂತೆ ಭಾಗದಲ್ಲಿ ಸರ್ಕಾರ ಬೇರೆ ಉದ್ದೇಶಕ್ಕಾಗಿ ರೈತರ ಕಬ್ಜಾದಲ್ಲಿರುವ ಭೂಮಿಯನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ನೀರಾವರಿ ಇಲಾಖೆ ಎಇಇ ಅವರು ಜಿಲ್ಲಾಡಳಿತದ ಗಮನಕ್ಕೆ ತರದೇ ದುರಾಡಳಿತ ನಡೆಸುತ್ತಿದ್ದಾರೆ. ರೈತರು ಅಳವಡಿಸಿದ ಪೈಪ್‌ಲೈನ್, ಟಿಸಿ ಕಿತ್ತು ಹಾಕಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರ ಕಬ್ಜಾದಲ್ಲಿರುವ ಜಮೀನನ್ನು ವಶಕ್ಕೆ ಪಡೆಯಬಾರದು. ಹುಬ್ಬಳ್ಳಿ-ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ಹಿಡಕಲ್ ನೀರು ಪೂರೈಸಬಾರದು. ನೀರು ಪೂರೈಕೆಗಾಗಿ ನಡೆದಿರುವ ಕಾಮಗಾರಿ ಮುಂದುವರಿಸಿದರೆ ಎಲ್ಲ ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚೂನಪ್ಪ ಪೂಜಾರಿ, ಪಚ್ಚಿ ನಂಜುಂಡಿಸ್ವಾಮಿ, ಶಶಿಕಾಂತ ಪಡಸಲಗಿ, ಪ್ರಕಾಶ ನಾಯಿಕ, ಕಿಶನ್ ನಂದಿ, ರಾಜಕುಮಾರ್ ಜಂಬಗಿ, ಬಾಬು ಜತ್ತಿ, ನಿಂಗಪ್ಪ ಪಂಕಂಡಿ, ಶಿವಾನಂದ ಸಂವಸುದ್ದಿ, ಆಸ್ಮಾ ಜೂಟದಾರ, ರಮೇಶ ಕಲ್ಲಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net