ಪಿಪಿಪಿ ಮಾದರಿ ಕೈಬಿಡದಿದ್ದರೆ ಉಗ್ರ ಹೋರಾಟ

Fierce struggle if PPP model is not abandoned
Published on

ವಿಜಯಪುರ:ಸರ್ಕಾರಿ ವೈದ್ಯಕಿಯ ಕಾಲೇಜ್​ ಸ್ಥಾಪಿಸಲು ಆಗ್ರಹಿಸಿ ಮತ್ತು ಪಿಪಿಪಿ ಮಾದರಿ ವಿರೋಧಿಸಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಹೋರಾಟ ತಾಲೂಕು ಕೇಂದ್ರಗಳಿಗೂ ವಿಸ್ತರಿಸಿದೆ.ಈಗಾಗಲೇ ಇಂಡಿ ಸೇರಿ ಹಲವು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. ಗ್ರಾಮೀಣ ಭಾಗಗಳಿಂದಲೂ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಅನೇಕ ಸಂಟನೆಗಳು, ಸಂ&ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸುತ್ತಿವೆ. ಈಗಾಗಲೇ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ ಶನಿವಾರ 24ನೇ ದಿನ ಪೂರೈಸಿ ಯಶಸ್ವಿಯಾಗಿ ಮುಂದುವರಿದಿದೆ. ಹೋರಾಟ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಜಿಲ್ಲಾ ಶಸ ಚಿಕಿತ್ಸಕರ ಮೂಲಕ ಮನವಿ:ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯಿಂದ ಶನಿವಾರ ಜಿಲ್ಲಾಸ್ಪತ್ರೆಯ ಶಸ ಚಿಕಿತ್ಸಕರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ಸಮಿತಿ ಸದಸ್ಯ ಭಗವಾನ್​ ರೆಡ್ಡಿ ಮಾತನಾಡಿ, ಜಿಲ್ಲೆಯು ಕೃಷಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರಸಿದ್ಧವಾಗಿದ್ದು, ಇಲ್ಲಿನ ಜನರಿಗೆ ಸಮರ್ಪಕ ವೈದ್ಯಕಿಯ ಸೌಲಭ್ಯಗಳ ಕೊರತೆಯಿದೆ. ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆಯು ಜಿಲ್ಲೆಯ ಆರೋಗ್ಯ ವ್ಯವಸ್ಥೆ ಬಲಪಡಿಸಿ, ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶ್ರೀ ಕ್ರಮ ಕೈಗೊಳ್ಳಬೇಕು ಎಂದರು.

ಗೀತಾ ಕಟ್ಟಿ, ಜಯಶ್ರೀ ಚಲವಾದಿ, ಕಮಲಾ ಮಂಟೂರ್​, ಭಾರತಿ ೂರಪಡೆ, ಸರೋಜಾ ಕಟ್ಟಿಮನಿ, ಲಕ್ಷಿ$್ಮ ಸರಸಂಬಿ, ಶಬನಾ ನದಾಫ್​, ಸಲ್ಮಾ ನದಾಫ್​, ಶೋಭಾ ವಾಲಿಕಾರ, ಮಹಾದೇವಿ ರಾಥೋಡ್​, ಸುನಂದಾ ರಾಥೋಡ್​, ಜವೇದಾ ಸಿಂದಗಿ, ಗೀತಾ ಪಾಟೀಲ್​, ಭಾರತಿ ಶಿವಣಗಿ, ಸ್ನೇಹಾ ಹೊಸಮನಿ, ಸುನಿತಾ ಚವಾಣ್​, ನೀಲಾ ರಾಥೋಡ್​, ಶ್ರೀದೇವಿ ಢಂಗೆ, ಲೀಲಾಬಾಯಿ ರಾಥೋಡ್​, ರಿಯನಾ ನದಾಫ್​, ಅಪ್ಸರಾ ಇನಾಮದಾರ್​, ಜಬೀನಾ ಅಥಣಿ, ಹಸೀನಾ ದಫೆದಾರ್​, ಮಮ್ತಾಜ್​ ಶಿಂದೆ, ಶೋಭಾ ರಾಥೋಡ್​, ಕವಿತಾ ಚವಾಣ್​, ರಾಜೇಶ್ವರಿ ಬಮ್ಮನಳ್ಳಿ, ನಿರ್ಮಲಾ ಗಿರಡೆ, ಶೋಭಾ ತೋಲನೂರ್​, ಅನಿತಾ ಪೂಜಾರಿ, ಶಬಾನಾ ಗಳಗಲಿ, ಪರವಿನ್​ ಮಕಂದಾರ್​, ದೀಪಾ ಬಗಾಡೆ, ಮುನ್ನಿ ಬಗಾಡೆ, ನೀಲಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ವಿದ್ಯಾವತಿ ಅಂಕಲಗಿ, ಲಲಿತಾ ಬಿಜ್ಜರಗಿ, ಅಕ್ರಂ ಮಾಶ್ಯಾಳಕರ, ರಾಜೇಶ್ವರಿ ಮಠಪತಿ, ಜಗದೇವ ಸೂರ್ಯವಂಶಿ, ಭೋಗೇಶ ಸೋಲಾಪುರ್​, ಸಂಜು ಶೆಟಗಾರ, ಲಕ್ಷ$್ಮಣ ಕಂಬಾಗಿ ಮತ್ತಿತರರಿದ್ದರು.

ವಿಜಯಪುರ ಜಿಲ್ಲಾ ಶಸ ಚಿಕಿತ್ಸಕರಿಗೆ ವೈದ್ಯಕಿಯ ಕಾಲೇಜ್​ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಭಗವಾನ್​ ರೆಡ್ಡಿ, ಗೀತಾ ಕಟ್ಟಿ, ಜಯಶ್ರೀ ಚಲುವಾದಿ, ಕಮಲಾ ಮಂಟೂರ್​ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net