

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿರುದ್ಧ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ವೇದಿಕೆ, ಕುರುಬರ ಸಂ, ಹಿಂದುಳಿದ ವರ್ಗಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗೆಹ್ಲೋಟ್ ಅವರ ಭಾವಚಿತ್ರಕ್ಕೆ ಚಪ್ಪಲಿ ಇಟ್ಟು, ಟಯರ್ ಮತ್ತು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆ ಸಂದರ್ಭ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದಿದ್ದರಿಂದ ಕೆಲಹೊತ್ತು ಸಂಚಾರ ಸಮಸ್ಯೆ ಉಂಟಾಗಿತ್ತು. ಸಂಚಾರ ತಡೆಗಟ್ಟಿದ್ದಕ್ಕೆ ಆೇಪಿಸಿದ ಪಿಎಸ್ಐ ಸಂಜಯ್ ತಿಪ್ಪರಡ್ಡಿ ಹಾಗೂ ಪೊಲೀಸರೊಂದಿಗೆ ಕೆಲವರು ವಾಗ್ವಾದವನ್ನೂ ನಡೆಸಿದರು.
ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್, ಎಪಿಎಂಸಿ ಮಾಜಿ ಉಪಾಧ್ಯ ನಾಗಪ್ಪ ರೂಢಗಿ, ರೈತ ಸಂದ ಜಿಲ್ಲಾಧ್ಯ ಸಿದ್ದನಗೌಡ ಬಿರಾದಾರ ವಕೀಲರು, ವೇದಿಕೆ ಅಧ್ಯ ಪಿ.ಬಿ.ಮಾತಿನ್ ಸೇರಿ ಹಲವರು ಗೆಹ್ಲೋಟ್ ಅವರ ಕ್ರಮ ಖಂಡಿಸಿ ಮಾತನಾಡಿ, ಸಿದ್ದರಾಮಯ್ಯ ಅವರ ವಿರುದ್ಧ ಕುತಂತ್ರ ಮುಂದುವರಿದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಹಿಂದ, ಕುರುಬರ, ದಲಿತ, ಪ್ರಗತಿಪರ, ಹಿಂದುಳಿದ ವರ್ಗ ಸೇರಿ ವಿವಿಧ ಸಂಟನೆಗಳ ಪ್ರಮುಖರಾದ ನಾಗಪ್ಪ ಹಾಲಪ್ಪನವರ, ಎಸ್.ಎಸ್.ಕೆರಿಗೊಂಡ, ಪ್ರಚಂಡಪ್ಪ ಚಲವಾದಿ, ಅಬ್ಬು ಶಿರೋಳ, ಬಸವರಾಜ ಬಿರಾದಾರ, ಚಂದ್ರಶೇಖರ ಮೇಟಿ, ಎಸ್.ಎ.ಬಿರಾದಾರ, ಬಿ.ಎಸ್.ಬೈಲಕೊಂಡ, ಹಾಜಿ ತೆಗ್ಗಿ, ಸಿದ್ದಲಿಂಗಪ್ಪ ಹುಡೇದ, ಹೊನ್ನಪ್ಪ ಸರೂರ, ಮುತ್ತು ಕೊಣ್ಣೂರ, ಸಂಗಮೇಶ ಗಸ್ತಿಗಾರ, ಶಿವಪ್ಪ ಮೇಟಿ, ಸಿದ್ದು ವಾಲಿಕಾರ, ಶಿವಲಿಂಗಪ್ಪ ಯರಝರಿ, ಬಸವರಾಜ ಕೊಣ್ಣೂರ, ರಮೇಶ ವಗ್ಗರ, ಶರಣಗೌಡ ವಣಿಕ್ಯಾಳ, ಎಸ್.ಎಸ್.ಭಂಡಾರಿ ಇತರರಿದ್ದರು. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.