ಅಂಗವಿಕಲರ ಸಮರ್ಥ ಕಲಿಕೆಗೆ ಕ್ಷೇತ್ರ ಭೇಟಿ ಸಹಕಾರಿ

17 LXR 3
Published on

ಲಕ್ಷ್ಮೇಶ್ವರ: ಅಂಗವಿಕಲರು ಸಾಮಾನ್ಯ ಮಕ್ಕಳಂತೆ ಇರಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಂಡಿರುವ ಕ್ಷೇತ್ರ ಭೇಟಿ ಉಪಯುಕ್ತವಾದ ಕಾರ್ಯಕ್ರಮವಾಗಿದೆ.ಅಂಗವಿಕಲರೂ ಕಲಿಕೆಯಲ್ಲಿ ಪಾಲ್ಗೊಳ್ಳಲು ಸಹಾಯಕವಾಗಲಿದೆ ಎಂದು ಪುರಸಭೆ ಸದಸ್ಯ ರಾಜೀವ ಕುಂಬಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಭಾನುವಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅಂಗವಿಕಲ ಮಕ್ಕಳಿಗಾಗಿ ಕ್ರೀಡೆ ಮತ್ತು ಅರಿವು ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳ ಕುರಿತು ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಎಸ್. ಭಜಂತ್ರಿ ಮಾತನಾಡಿದರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ ಹವಳದ, ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ಉಪಾಧ್ಯಕ್ಷೆ ಎಲ್.ಎ. ನಂದೆಣ್ಣವರ, ವಿಕಲಚೇತನರ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ. ಶಿರಹಟ್ಟಿ, ಬಿಆರ್‌ಪಿ ಬಿ.ಎಂ. ಯರಗುಪ್ಪಿ, ಸಿಆರ್‌ಪಿಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಮುಖ್ಯ ಶಿಕ್ಷಕರಾದ ಬಿ.ಎಂ. ಕುಂಬಾರ, ಡಿ.ಎನ್. ದೊಡ್ಡಮನಿ, ಎಸ್.ಬಿ. ಲಕ್ಷ್ಮೇಶ್ವರ, ವಿ.ಎನ್. ಪಾಟೀಲ, ಶಶಿಧರ ಚಳಗೇರಿ, ನಿತ್ಯಾನಂದ ವೀರೇಶಮಠ, ಇತರರಿದ್ದರು. ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net