ಹೊಲರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಿ

10 Ylb 01
ಯಲಬುರ್ಗಾ ತಾಲೂಕಿನ ಸಂಕನೂರು-ಹಾಲಕೇರಿ ಸಂಪರ್ಕಿಸುವ ರೈತರ ಜಮೀನು ರಸ್ತೆ ಹದಗೆಟ್ಟಿರುವುದು.
Published on

ಯಲಬುರ್ಗಾ: ತಾಲೂಕಿನ ಗಡಿ ಗ್ರಾಮ ಸಂಕನೂರಿನ ಗ್ರಾಮಸ್ಥರು ಹೊಲದ ರಸ್ತೆ ನಿರ್ಮಿಸುವಂತೆ ಸೋಮವಾರ ಒತ್ತಾಯಿಸಿದ್ದಾರೆ.

ಸಂಕನೂರು-ಹಾಲಕೇರಿ ಸಂಪರ್ಕ ರಸ್ತೆಯನ್ನು ಸಾರ್ವಜನಿಕರು ಮಾತ್ರವಲ್ಲದೇ ರೈತರು ಉಪಯೋಗಿಸುತ್ತಿದ್ದಾರೆ. ನರೇಗಾದ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ದುರಸ್ತಿಗೊಳಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ.

ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅನುದಾನ ಕೊರತೆ ನೆಪ ಹೇಳಿ ರಸ್ತೆ ದುರಸ್ತಿ ಮಾಡಲು ಮುಂದಾಗುತ್ತಿಲ್ಲ. ಪ್ರತಿ ಬಾರಿ ಮಳೆ ಬಂದಾಗ ಜಮೀನಿಗಳಿಗೆ ತೆರಳಿ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗುತ್ತಿದೆ.

ರಸ್ತೆಯ ಎರಡೂ ಬದಿ ಮುಳ್ಳು ಕಂಟೆಗಳು ಬೆಳೆದಿವೆ. ಇದರಿಂದ ಜಾನುವಾರು ಮತ್ತು ರೈತರಿಗೆ ಸಮಸ್ಯೆಯಾಗಿದೆ. ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರಾದ ಮಹಾಂತೇಶ ಪಾಟೀಲ್, ಶರಣಪ್ಪ ಸಂದಿಮನಿ, ಬಸವರಾಜ ದ್ಯಾಂಪೂರ, ಮಹ್ಮದ್‌ಸಾಬ್ ಬೆಳ್ಳಟ್ಟಿ, ಮೌಲಾಸಾಬ್ ಮ್ಯಾಗೇರಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net