

ಮೈಸೂರು: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದೇಶಕ್ಕೆ ನೀಡಿರುವ ಸೇವೆಯನ್ನು ಸೂರ್ಯ, ಚಂದ್ರ ಇರುವವರೆಗೂ ಪ್ರತಿಯೊಬ್ಬರು ನೆನೆಸಿಕೊ ಳ್ಳಬೇಕು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಕೊಡವ ಸಮಾಜ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಬಳಗ ವತಿಯಿಂದ ನಗರದ ಕಾರ್ಯಪ್ಪ ವೃತ್ತದಲ್ಲಿ ಮಂಗಳ ವಾರ ಕಾರ್ಯಪ್ಪ ಜನ್ಮದಿನಾಚರಣೆಯಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಿಜಯನಗರದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ನಿರ್ಮಾಣ ಮಾಡುವ ಬೇಡಿಕೆ ಬಂದಿದ್ದು, ನನ್ನ ಸ್ವಂತ ಖರ್ಚಿನಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕೊಡಗಿನಲ್ಲಿ ಮನೆ ಮನೆಯಲ್ಲೂ ಸೈನಿಕರು ಇದ್ದಾರೆ. ಕಾರ್ಯಪ್ಪ ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರು ಅತ್ಯುತ್ತಮ ಭಾರತೀಯ ಸೇನೆಯನ್ನು ನಿರ್ಮಿಸಿದರು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಸರ್ಕಾರದಿಂದ ಸಾಧು ಸಂತರ ಜನ್ಮದಿನಾಚರಣೆ ಮಾಡಿದ ರೀತಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆ ಮಾಡಬೆಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್‌ಗಳಾದ ಎಂ.ಜೆ. ರವಿಕುಮಾರ್, ಶ್ರೀಕಂಠಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾಳೇಟಿರ ಸುಬ್ಬಯ್ಯ, ಪ್ರಮೀಳಾ ಭರತ್, ಕೊಡವ ಸಮಾಜದ ಅಧ್ಯಕ್ಷ ಪಿ.ಎ.ಗಣಪತಿ, ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಸಿ.ಅಶೋಕ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಬಳಗದ ಅಧ್ಯಕ್ಷ ನಾಯಕಂಡ ತಿಮ್ಮಯ್ಯ ಇತರರು ಇದ್ದರು.