ಹೊಲ, ಮನೆಗೆ ಕಲ್ಪಿಸಿ ದಾರಿ ಸೌಲಭ್ಯ

P PURA ABAKAARI VISIT 09
Published on

ಪರಶುರಾಮಪುರ: ಹೊಲ, ಮನೆಗಳಿಗೆ ತೆರಳಲು ರೂಢಿದಾರಿ ಒತ್ತುವರಿ ತೆರವು, ಬೆಳೆನಷ್ಟ, ಬೆಳೆವಿಮೆ ಮಂಜೂರು, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಒತ್ತಾಯಿಸಿದರು.

ಗ್ರಾಮದ ಸಂಘದ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ ಮಾತನಾಡಿದರು. ಗ್ರಾಮ ಘಟಕದ ಅಧ್ಯಕ್ಷ ನವೀನಗೌಡ, ಕಾರ್ಯದರ್ಶಿ ಕೊಂಡ್ಲೇರ ಪರಮೇಶಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ, ವೆಂಕಟರಮಣಪ್ಪ, ಉಪಾಧ್ಯಕ್ಷರಾದ ಜಂಪಣ್ಣ, ತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net