ಕ್ಷೇತ್ರ ಅಭಿವೃದ್ಧಿಗೊಳಿಸಲು ಜನರ ಪ್ರೀತಿ, ವಿಶ್ವಾಸವೇ ಕಾರಣ

23imam4-Web
ಬೆಳಗಾವಿ ತಾಲೂಕಿನ ಸಾವಗಾಂವದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿಪೂಜೆ ನೆರವೇರಿಸಿದರು. ಭುಜಂಗ ಮುಲಗಿ, ಲಕ್ಷ್ಮಣ ಕದಂ, ಸಂಗೀತಾ ಬಣಕಾರ, ಕಲ್ಲಪ್ಪ ಪಾಟೀಲ, ಲಕ್ಷ್ಮೀ ಸುತಾರ ಇತರರಿದ್ದರು.
Published on

ಬೆಳಗಾವಿ: ಈ ಹಿಂದೆ ಹುಡುಕಾಡಿದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿರಲಿಲ್ಲ. ಈಗ ಅಭಿವೃದ್ಧಿಯಾಗದ ಗ್ರಾಮ ಕಾಣುತ್ತಿಲ್ಲ. ಮೂರೇ ವರ್ಷಗಳಲ್ಲಿ ಇಷ್ಟೊಂದು ಬದಲಾವಣೆ ತರಲು ಜನರ ಸಹಕಾರ, ಪ್ರೀತಿ ಮತ್ತು ವಿಶ್ವಾಸವೇ ಕಾರಣ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ತಾಲೂಕಿನ ಸಾವಗಾಂವ ಗ್ರಾಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ 21 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಜನರ ಋಣ ತೀರಿಸುವುದು ನನ್ನ ಕರ್ತವ್ಯ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಎಂದರು. ಎನ್.ಕೆ. ಪಾಟೀಲ, ಮಾಯಪ್ಪ ಗಾಟಿಗಸ್ತಿ, ಗಣಪತಿ ಪಾಟೀಲ, ವೈ.ಎಂ. ಪಾಟೀಲ, ಗೀತಾ ಸಾವಗಾಂವಕರ್, ಸಂಗೀತಾ ಬಣಕಾರ, ಕಲ್ಲಪ್ಪ ಪಾಟೀಲ, ಲಕ್ಷ್ಮೀ ಸುತಾರ, ಬಾಳು ಪಾಟೀಲ, ಕೃಷ್ಣ, ಭುಜಂಗ ಮುಲಗಿ, ಲಕ್ಷ್ಮಣ ಕದಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net