ಶಿಕ್ಷಕರ ಅನುಕೂಲಕ್ಕಾಗಿ ಗುರುಸ್ಪಂದನಾ ಕಾರ್ಯಕ್ರಮ; ಬಿಇಒ ಪದ್ಮನಾಭ ಕರ್ಣಂ

SEVA BOOK
ಕುಕನೂರು ಪಟ್ಟಣದ ಸರ್ಕಾರಿ ಮಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಕುಕನೂರು ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಗುರುಸ್ಪಂದನಾ ಕಾರ್ಯಕ್ರಮದಲ್ಲಿ ಬಿಇಒ ಪದ್ಮನಾಭ ಕರ್ಣಂ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ತಳವಾರ, ಶಿಕ್ಷಕರಾದ ಪ್ರಭು ಶಿವನಗೌಡ್ರ, ಶಿವಕುಮಾರ ಮುತ್ತಾಳ, ಮಾರುತಿ ಹಾದಿಮನಿ ಇದ್ದರು.
Published on

ಕುಕನೂರು: ತಾಲೂಕಿನ ಎಲ್ಲ ವಲಯಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡದಿಂದ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸೇವಾ ಪುಸ್ತಕದಲ್ಲಿ ನಿಮಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ದಾಖಲಿಸಲಾಗಿದೆ. ಕಾರಣಾಂತರಗಳಿಂದ ಹಾಗೂ ದಾಖಲೆಗಳ ಕೊರತೆಯಿಂದಾಗಿ ನಮೂದಿಸುವುದನ್ನು ಬಿಟ್ಟಿದ್ದರೆ ನಮ್ಮ ಗಮನಕ್ಕೆ ತರಬೇಕು ಎಂದು ಬಿಇಒ ಪದ್ಮನಾಭ ಕರ್ಣಂ ಹೇಳಿದರು.

ಪಟ್ಟಣದ ಸರ್ಕಾರಿ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಕನೂರು ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೇವಾ ವೃತ್ತಿಯಲ್ಲಿ ದೊರೆಯಬಹುದಾದ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಎಲ್ಲ ಅಂಶಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸಿದ ಬಗ್ಗೆ ತಿಳಿಯಲು ಮತ್ತು ಬಿಟ್ಟು ಹೋಗಿರುವ ಸೌಲಭ್ಯಗಳನ್ನು ಸೇರಿಸುವುದಕ್ಕಾಗಿ ಗುರುಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ ಮಾತನಾಡಿ, ಸೇವಾ ವೃತ್ತಿಯಲ್ಲಿನ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸೌಲಭ್ಯಗಳನ್ನು ಒದಗಿಸುವ ಸುದಿನವಾಗಿದೆ. ಯಾವುದಾದರೂ ಸಮಸ್ಯೆಗಳಿದ್ದರೆ, ಇವತ್ತಿನ ದಿನವೇ ಅದಕ್ಕೆ ಪರಿಹಾರ ಪಡೆಯಬಹುದು. ಇಲ್ಲವೇ ಸಂಬಂಧಿಸಿದ ದಾಖಲೆಗಳನ್ನು ನೀಡಿ ಮನವಿ ಸಲ್ಲಿಸಬಹುದು ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ತಳವಾರ ಅಧ್ಯಕ್ಷತೆ ವಹಿಸಿದರು. ಶಿಕ್ಷಕರಾದ ಪ್ರಭು ಶಿವನಗೌಡ್ರ, ಶಿವಕುಮಾರ ಮುತ್ತಾಳ, ಮಾರುತಿ ಹಾದಿಮನಿ, ಶಂಭು ಅರಿಶಿನದ, ಸುರೇಶ ಮಾದಿನೂರ, ಆರ್.ಶರಣಪ್ಪ, ವೀರನಗೌಡ ಪಾಟೀಲ್, ಉಮೇಶ ಕಂಬಳಿ, ಲಿಂಗರಡ್ಡೆಪ್ಪ ಕರಮುಡಿ, ಅಬ್ದುಲ್ ಖದೀರ್ ದೇವದುರ್ಗ, ಶಿವಕುಮಾರ ಮುತ್ತಾಳ, ಶಾಂತಾದೇವಿ ಹಿರೇಮಠ, ಹುಲಿಗೆಮ್ಮ ವಜ್ರಬಂಡಿ, ಅಶೋಕ ಮಾದಿನೂರ, ಪೀರ್‌ಸಾಬ್ ದಫೇದಾರ, ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಣ್ಣ ಮೆಣಸಿನಕಾಯಿ, ಪ್ರಭು ಶಿವನಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net