

ಮುದ್ದೇಬಿಹಾಳ: ಅಂಗವಿಕಲರು ವಿಶೇಷವಾಗಿದ್ದು ಸಾಮಾನ್ಯ ಜನರಿಗಿಂತ ಅವರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಹೊರತರುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಸರ್ಕಾರಿ ಇಲಾಖೆಗಳು, ಅಂಗವಿಕಲರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ಮುದ್ದೇಬಿಹಾಳ ತಾಲೂಕುಮಟ್ಟದ ಅಂಗವಿಕಲರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಸದುಪಯೋಗ ಮಾಡಿಕೊಳ್ಳಬೇಕು. ಅವರಿಗೆ ಅನುಕಂಪದ ಬದಲು ಅವಕಾಶ, ಸೌಲಭ್ಯ ಸಿಗಬೇಕು ಎಂದರು.
ಚಿಂತಕ ಅರವಿಂದ ಕೊಪ್ಪ ಮಾತನಾಡಿ, ಅವಕಾಶಗಳ ಕೊರತೆಯ ನಡುವೆಯೂ ಅಂಗವಿಕಲರು ತಮ್ಮ ಸಾಮರ್ಥ್ಯ ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ಅಂಗವಿಕಲರ ಕಾರ್ಯಕ್ರಮಗಳಲ್ಲಿ ತಾಲೂಕಾಡಳಿತ, ಜನಪ್ರತಿನಿಧಿಗಳು ಭಾಗಿಯಾಗದೆ ನಿರ್ಲಕ್ಷೃ ತೋರುತ್ತಿರುವುದು ನೋವಿನ ಸಂಗತಿ ಎಂದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಣಿ ಅನಸೂಯಾ ತೇರದಾಳ, ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ, ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ, ಒಕ್ಕೂಟದ ಪದಾಧಿಕಾರಿಗಳಾದ ಸಂಗಣ್ಣ ಹುಣಶ್ಯಾಳ, ಅಡಿವೆಪ್ಪ ಕೊಡಗಾನೂರ, ನಗರ ಘಟಕ ಅಧ್ಯಕ್ಷ ನಾಗೇಶ ಅಮರಾವತಿ, ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ದಿವ್ಯಾಂಗರು ಪಾಲ್ಗೊಂಡಿದ್ದರು.
ಈರಣ್ಣ ಬಿಜ್ಜೂರ ಪ್ರಾರ್ಥಿಸಿದರು. ರುದ್ರಗೌಡ ಗೌಡರ ಸ್ವಾಗತಿಸಿ ನಿರೂಪಿಸಿದರು. ಈರಯ್ಯ ಹಿರೇಮಠ ವಂದಿಸಿದರು. ಉದ್ಘಾಟನೆ ಸಮಾರಂಭದ ನಂತರ ನಡೆದ ಕ್ರೀಡಾಕೂಟದಲ್ಲಿ ಗುಂಡು ಎಸೆತ, ಓಟ, ಹಾಡು, ಮ್ಯೂಜಿಕಲ್ ಚೇರ್ ಸೇರಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿವಿಧ ಶಾಲೆಗಳ ದೈಹಿಕ ಶಿಕ್ಷಕರಾದ ಚಂದ್ರಕಾಂತ ಮನಗೂಳಿ, ಶೇಖರ ಲಮಾಣಿ, ಗುರುಪಾದಯ್ಯ ಸಾಲಿಮಠ, ಶರಣು ಇದ್ದಲಗಿ, ಬಸವರಾಜ ರಾಮವಾಡಗಿ ಇನ್ನಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪಡೆದವರು: ಮುದ್ದೇಬಿಹಾಳ ತಾಲೂಕು ಮಟ್ಟದ ಅಂಗವಿಕಲರ ಕ್ರೀಡಾಕೂಟದ ದೈಹಿಕ ಸ್ಪರ್ಧೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪ್ರಥಮ ಸ್ಥಾನ ಪಡೆದವರ ಹೆಸರುಗಳನ್ನು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ ಅವರು ತಿಳಿಸಿದ್ದಾರೆ.
ದೈಹಿಕ ಚಟುವಟಿಕೆಯ ಪುರುಷರ ವಿಭಾಗದಲ್ಲಿ ದೈಹಿಕ ಅಂಗವಿಕಲರಾದ ವಿನಾಯಕ ಪೂಜಾರಿ (100 ಮೀಟರ್ ಓಟ), ಪ್ರಕಾಶ ಗೂಡ್ಲಮನಿ (ಗುಂಡು ಎಸೆತ), ರುದ್ರಗೌಡ ಗೌಡರ (ಬಕೆಟ್‌ನಲ್ಲಿ ರಿಂಗ್), ದೃಷ್ಟಿದೋಷವುಳ್ಳವರಾದ ಈರಣ್ಣ ಬಿಜ್ಜೂರ (50 ಮೀಟ್ ನಡಿಗೆ), ಪ್ರಕಾಶ ಗೂಡ್ಲಮನಿ (ಗುಂಡು ಎಸೆತ), ರುದ್ರಗೌಡ ಗೌಡರ (ಮ್ಯೂಜಿಕಲ್ ಚೇರ್), ಶ್ರವಣದೋಷವುಳ್ಳವರಾದ ಮದನ್ ನಡಹಟ್ಟಿ (100 ಮೀಟರ್ ಓಟ, ಗುಂಡು ಎಸೆತ, ಉದ್ದ ಜಿಗಿತ).
ದೈಹಿಕ ಚಟುವಟಿಕೆಯ ಮಹಿಳೆಯರ ವಿಭಾಗದಲ್ಲಿ ದೈಹಿಕ ಅಂಗವಿಕಲರಾದ ನೀಲಮ್ಮ ಹುಲಗಬಾಳ (100 ಮೀಟರ್ ಓಟ), ಅನಿತಾ ಲಮಾಣಿ (ಗುಂಡು ಎಸೆತ), ದ್ಯಾಮವ್ವ ನಡಹಟ್ಟಿ (ಬಕೆಟ್‌ನಲ್ಲಿ ರಿಂಗ್), ದೃಷ್ಟಿದೋಷವುಳ್ಳವರಾದ ವಿಜಯಲಕ್ಷ್ಮೀ ಸಂಗಮ (50 ಮೀಟರ್ ನಡಿಗೆ, ಮ್ಯೂಜಿಕಲ್ ಚೇರ್), ನಿಂಗಮ್ಮ ನೆರಬೆಂಚಿ (ಗುಂಡು ಎಸೆತ), ಶ್ರವಣದೋಷವುಳ್ಳವರಾದ ದ್ಯಾಮವ್ವ ನಡಹಟ್ಟಿ (100 ಮೀಟರ್ ಓಟ, ಗುಂಡು ಎಸೆತ), ಎನ್.ಎಂ.ಅತ್ತಾರ (ಉದ್ದ ಜಿಗಿತ).
ಸಾಂಸ್ಕೃತಿಕ ಚಟುವಟಿಕೆಯ ಪುರುಷರ ವಿಭಾಗದಲ್ಲಿ ದೈಹಿಕ ಅಂಗವಿಕಲರಾದ ನಾಗೇಶ ಅಮರಾವತಿ (ಗಾಯನ), ಬಾಲಪ್ಪ ಬಿಸಲದಿನ್ನಿ (ಏಕಪಾತ್ರಾಭಿನಯ). ದೃಷ್ಟಿದೋಷವುಳ್ಳವರಾದ ಮುತ್ತು ಬಿದರಕುಂದಿ (ಗಾಯನ), ಮಹಾಂತೇಶ ಲಿಂಗದಳ್ಳಿ (ಏಕಪಾತ್ರಾಭಿನಯ). ಶ್ರವಣದೋಷವುಳ್ಳವರಾದ ಮದನ ನಡಹಟ್ಟಿ (ಗಾಯನ), ಮೌನೇಶ ಬಡಿಗೇರ (ಏಕಪಾತ್ರಾಭಿನಯ).
ಸಾಂಸ್ಕೃತಿಕ ಚಟುವಟಿಕೆಯ ಮಹಿಳೆಯರ ವಿಭಾಗದಲ್ಲಿ ದೈಹಿಕ ಅಂಗವಿಕಲರಾದ ನೀಲಮ್ಮ ಹುಲಗಬಾಳ (ಗಾಯನ, ಏಕಪಾತ್ರಾಭಿನಯ). ದೃಷ್ಟಿದೋಷವುಳ್ಳರಾದ ವಿಜಯಲಕ್ಷ್ಮೀ ಸಂಗಮ (ಗಾಯನ, ಏಕಪಾತ್ರಾಭಿನಯ). ಶ್ರವಣದೋಷವುಳ್ಳರಾದ ದ್ಯಾಮವ್ವ ನಡಹಟ್ಟಿ (ಗಾಯನ, ಏಕಪಾತ್ರಾಭಿನಯ).