ಸಂಭ್ರಮದಿಂದ ಜರುಗಿದ ಪಲ್ಲಕ್ಕಿ ಉತ್ಸವ

swamy
ಸೋಗಿ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹೂವಿನಹಡಗಲಿಯಲ್ಲಿ ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ಕನ್ನೆಯಿಂದ ಬಾಯಿಯ ಮೂಲಕ ಹಗ್ಗವನ್ನು ಪೋಣಿಸುವ ಹರಕೆ ತೀರಿಸಿದರು.
Published on

ಹೂವಿನಹಡಗಲಿ: ತಾಲೂಕಿನ ಸೋಗಿ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಗುರುವಾರ ಸಂಭ್ರಮ ಸಡಗರದಿಂದ ಬುಧವಾರ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ಸ್ವಾಮಿಯ ಪಲ್ಲಕ್ಕಿ ಉತ್ಸವ ಸೋಗಿ ಗ್ರಾಮದಿಂದ ಪಟ್ಟಣ ಪ್ರವೇಶಿಸಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ನದಿ ತೀರಕ್ಕೆ ತೆರಳಿ ಗಂಗೆ ಪೂಜೆ ನೆರವೇರಿಸಲಾಯಿತು.

ನಂತರ ಗುರುವಾರ ಬೆಳಗ್ಗೆಯಿಂದ ಸ್ವಾಮಿಯ ಪಲ್ಲಕ್ಕಿ ಉತ್ಸವ ಸಕಲವಾಧ್ಯಗಳಾದ ಸಮಾಳ, ನಂದಿಕೋಲು, ಡೊಳ್ಳುಕುಣಿತ ಮಂಗಳ ವಾದ್ಯಗಳ ಭವ್ಯ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.

ನಂತರ ಸೋಗಿ ಗ್ರಾಮದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುರಪ್ರವೇಶ ಮಾಡಿಕೊಳ್ಳಲಾಯಿತು. ಈ ವೇಳೆ ಪುರವಂತರು ಒಡಪುಗಳನ್ನು ಹೇಳುವುದು ಹಾಗೂ ಶಸ್ತ್ರ ಚುಚ್ಚಿಕೊಳ್ಳುವುದು. ಕೆನ್ನೆಯ ಮೂಲಕವಾಗಿ ಬಾಯಿಯಿಂದ ಹಗ್ಗವನ್ನು ಪೋಣಿಸಿ ಹೊರಹಾಕುವ ಹರಕೆಗಳು ಜರುಗಿದವು.

ಪಲ್ಲಕ್ಕಿ ಉತ್ಸವದಲ್ಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲಕೆರಿಮಠದ ಚನ್ನಬಸವ ಸ್ವಾಮೀಜಿ, ತಾಲೂಕು ವೀರಶೈವ ಮಹಾಸಭೆ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ನಗರ ಘಟಕದ ಅಧ್ಯಕ್ಷ ಹಕ್ಕಂಡಿ ಶಿವನಾಗಪ್ಪ, ಕಾರ್ಯದರ್ಶಿ ಗೌರಿಶಂಕರ, ಗೌರವಾಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಸೋಗಿ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಟಿ.ನಾಗಪ್ಪ, ಸದಸ್ಯರಾದ ಚಂದ್ರು, ವೀರೇಶ, ಕೊಟ್ರೇಶ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net