ಸಂಭ್ರಮದ ಶಿಶುನಾಳ ಶರೀಫರ ಲಘು ರಥೋತ್ಸವ

GJD TERU
Published on

ಗಜೇಂದ್ರಗಡ: ಪಟ್ಟಣದ ಕಟ್ಟಿಬಸವೇಶ್ವರ ನಗರದಲ್ಲಿರುವ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಲಘು ರಥೋತ್ಸವ ಭಾನುವಾರ ನೂರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಶರೀಫ ಸಾಹೇಬರ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ಸಂಜೆ ಲಘು ರಥೋತ್ಸವವು ಶರೀಫರ ಮಠದಿಂದ ಕಟ್ಟಿಬಸವೇಶ್ವರ ದೇವಸ್ಥಾನದವರೆಗೆ ತೆರಳಿ ಮರಳಿ ಶರೀಫರ ಮಠ ತಲುಪಿತು. ಆಗ ಭಕರೆಲ್ಲ ಚಪ್ಪಳೆ ಹೊಡೆದು ಸಂಭ್ರಮಿಸಿದರು. ಬಳಿಕ ಅನ್ನ ಸಂತರ್ಪನೆ ನಡೆಯಿತು.

ಪ್ರಭು ಚವಡಿ, ಯಮನಪ್ಪ ಜಾಲಗಾರ, ಚಂಬಣ್ಣ ಚವಡಿ, ಪರಸಪ್ಪ ಹೊಸಮನಿ, ಬಸಯ್ಯ ಗೊಂಗಡಶೆಟ್ಟಿಮಠ, ಸಂಗಪ್ಪ ವಡಗೇರಿ, ಸುರೇಶ ಗಾಯಕವಾಡ, ರವಿ ವಡಗೇರಿ, ಪ್ರದೀಪ ಗೊಂಗಡಶೆಟ್ಟಿಮಠ, ಚಂದ್ರು ಆಲಾಪೂರ, ಮಂಜುನಾಥ ಚವ್ಹಾಣ, ಮುತ್ತಣ್ಣ ಚವಡಿ, ಮಂಜುನಾಥ ಸರಗಣಾಚಾರಿ, ಅಂಬ್ರೇಶ ಚವಡಿ, ಬಸವರಾಜ ಹೊಸಮನಿ, ಪ್ರಶಾಂತ ವಡಗೇರಿ, ವಿನಾಯಕ ಕೊಟಗಿ, ಬಸವರಾಜ ಹೊಸಮನಿ, ಶಶಿ ಹರಗಬಾಳ, ಪ್ರವೀಣ ಆಲಾಪೂರ, ಮಲ್ಲು ಮಡಿವಾಳರ, ನಿರಂಜನ ಗೌರಿಮಠ, ಶ್ಯಾಮ ಕಂಪ್ಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net