ಮೈಸೂರಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

Festive Christmas celebrations in Mysore
Published on

ಮೈಸೂರು: ನಗರದಲ್ಲಿ ಬುಧವಾರ ಸಡಗರ, ಸಂಭ್ರಮದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಆಚರಿಸಲಾಯಿತು. ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಸಂಭ್ರಮ ಮನೆ ಮಾಡಿತು.

ಅಶೋಕ ರಸ್ತೆಯ ಸಂತ ಫಿಲೋಮಿನಾ ಚರ್ಚ್, ಹಿನಕಲ್‌ನ ಇನ್‌ಫ್ಯಾಂಟ್ ಜೀಸಸ್ ಚರ್ಚ್, ಲಕ್ಷ್ಮೀಪುರಂನ ಹಾರ್ಡ್ವಿಕ್ ಚರ್ಚ್, ರಾಮಕೃಷ್ಣ ನಗರದ ಯೇಸು ಕೃಪಾಲಯ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಕ್ರೈಸ್ತರು ಮಂಗಳವಾರ ಮಧ್ಯರಾತ್ರಿ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬುಧವಾರ ಬೆಳಗ್ಗೆ ಸಹ ಸಾಕಷ್ಟು ಸಂಖ್ಯೆಯಲ್ಲಿ ಜನರು ಚರ್ಚ್‌ಗೆ ಭೇಟಿ ಪ್ರಾರ್ಥನೆ ಸಲ್ಲಿಸಿದರು.

ಚರ್ಚ್‌ಗಳ ಜತೆಗೆ ಕ್ರೈಸ್ತರು ತಮ್ಮ ಮನೆಗಳನ್ನು ಸಹ ಸಿಂಗರಿಸಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಯೇಸರು ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಮನೆಗಳ ಮುಂದೆ ನಕ್ಷತ್ರ ಪ್ರತಿಕೃತಿಗಳನ್ನು ಅಳವಡಿಸಲಾಗಿತ್ತು. ಕ್ರೈಸ್ತರು ಹೊಸ ಉಡುಪುಗಳನ್ನು ಧರಿಸಿ ಬಾಂಧವರಿಗೆ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಯೇಸು ಕೊಟ್ಟಿಗೆಯಲ್ಲಿ ಜನಿಸಿದ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಚರ್ಚ್‌ಗಳು ಹಾಗೂ ಮನೆಗಳಲ್ಲಿ ಗೋದಲಿ ನಿರ್ಮಿಸಿ ಬಾಲ ಬಾಲ ಯೇಸುವಿನ ಮೂರ್ತಿಯನ್ನು ಇಟ್ಟು ಪೂಜಿಸಲಾಯಿತು. ಸಾಂತಾ ಕ್ಲಾಸ್ ಎಲ್ಲರ ಮನೆಗೆ ತೆರಳಿ ಬಾಳಿಗೆ ಬೆಳಕಾಗಲಿ ಎಂದು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net