

ಗುಂಡ್ಲುಪೇಟೆ: ಶನಿವಾರ ತಾಲೂಕಿನಾದ್ಯಂತ ಭಕ್ತರು ಷಷ್ಠಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಈ ಅಂಗವಾಗಿ ಮಹಿಳೆಯರು ತಮ್ಮ ಮನೆಗಳನ್ನು ಶುಚಿಗೊಳಿಸಿ ನಸುಕಿನಲ್ಲಿಯೇ ಮಡಿಯುಟ್ಟು ಕುಟುಂಬದ ಸದಸ್ಯರೊಂದಿಗೆ ಹುತ್ತಕ್ಕೆ ತನಿ ಎರೆಯುವ ಮೂಲಕ ಹಬ್ಬ ಆಚರಿಸಿದರು. ಪಟ್ಟಣದಲ್ಲಿ ನಾಗರಕಲ್ಲುಗಳು ಹಾಗೂ ಹೊರವಲಯಗಳ ಹುತ್ತಗಳಿಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ತನಿ ಎರೆದರು. ಗ್ರಾಮಾಂತರ ಪ್ರದೇಶಗಳ ಜನರು ತಮ್ಮ ಜಮೀನುಗಳು ಇಲ್ಲವೇ ದೇವಾಲಯಗಳ ಬಳಿ ಮೂಡಿರುವ ಹುತ್ತಗಳಿಗೆ ತನಿ ಎರೆದರು.