ಮಳೆ ನಡುವೆಯೂ ಹಬ್ಬದ ಸಂಭ್ರಮ

 ಆಲೂರಿನ ಕೊನೆಪೇಟಿ ಗಣಪತಿ ಪೆಂಡಾಲಿನಲ್ಲಿ ಗಣಪತಿ-ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು.
ಆಲೂರಿನ ಕೊನೆಪೇಟಿ ಗಣಪತಿ ಪೆಂಡಾಲಿನಲ್ಲಿ ಗಣಪತಿ-ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು.
Published on

ಆಲೂರು: ಗೌರಿ ಗಣೇಶ ಹಬ್ಬಕ್ಕೆ ಎಲ್ಲೆಡೆ ಸಂಭ್ರಮದ ಚಾಲನೆ ದೊರೆತಿದ್ದು, ಹಬ್ಬದ ಎರಡನೇ ದಿನವಾದ ಶುಕ್ರವಾರ ಸೋನೆ ಮಳೆ ಪ್ರಾರಂಭವಾಯಿತಾದರೂ ಜಿನುಗು ಮಳೆ ನಡುವೆಯೂ ಜನರು ಹಬ್ಬ ಆಚರಿಸಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ, ಕೊನೆಪೇಟೆ ಮತ್ತು ಕೆಇಬಿ ವೃತ್ತದಲ್ಲಿ ಮಣ್ಣಿನ ಬೃಹತ್ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಕೆಇಬಿ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಪೆಂಡಾಲ್ನ ಮುಂಭಾಗ ಭಾಗವಧ್ವಜ ಆರೋಹಣ ಮಾಡಲಾಯಿತು.

ತಾಲೂಕಿನ ಪ್ರತಿ ಗ್ರಾಮದಲ್ಲಿ ಯುವಜನರು ಸಂಘಟಿತರಾಗಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ಕೆಲವರು ಮನೆಯಲ್ಲಿ ಪೂಜೆಸಲ್ಲಿಸಿದರೆ, ಇನ್ನೂ ಕೆಲವರು ಸಮೀಪದ ಕೆರೆ, ಬಾವಿಗಳಲ್ಲಿ ಮೂರ್ತಿಗಳನ್ನು ಸಂಜೆ ವಿಸರ್ಜನೆ ಮಾಡಿದರು.

ಗಣಪತಿ ಪೆಂಡಾಲ್‌ಗಳಲ್ಲಿ ನಿತ್ಯ ಪೂಜಾ ವಿಧಿವಿದಾನಗಳು ನಡೆಯಲಿದ್ದು, ಪ್ರತಿದಿನ ಸಂಜೆ ವಿವಿಧ ತಂಡಗಳು, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net