ಮನೆ-ಮನ ಒಂದಾಗಿಸುವ ಹಬ್ಬಗಳು

h28-mulagi
Published on

ಹುಬ್ಬಳ್ಳಿ: ನಮ್ಮ ಹಬ್ಬಗಳು ಮನೆ- ಮನಗಳನ್ನು ಒಂದಾಗಿಸುತ್ತವೆ. ಬೇಸರ ಕಳೆದು ಹೊಸ ಬಾಳಿಗೆ ತೊಡಗಲು ಅನುಕೂಲ ಕಲ್ಪಿಸುತ್ತವೆ ಎಂದು ಬಸವ ಸೇವಾ ಸಮಿತಿ ಅಧ್ಯಕ್ಷ ವಿ.ವಿ. ಕುರ್ತಕೋಟಿ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಶರಣ ಸಾಹಿತ್ಯ ಪರಿಷತ್ತು, ಧಾರವಾಡ ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜೀವಿ ಕಲಾವಿದ ಬಳಗ, ಕನ್ನಡ ಕಲಾಕೃತಿ ಬಳಗ, ಬಸವ ಸೇವಾ ಸಮಿತಿ ಆಶ್ರಯದಲ್ಲಿ ಇಲ್ಲಿನ ವಿದ್ಯಾನಗರದ ಮನೆಯೊಂದರಲ್ಲಿ ಸೋಮವಾರ ಏರ್ಪಡಿಸಿದ್ದ ಮನೆ ಮನೆಯಲ್ಲಿ ಶ್ರಾವಣ ಜಾನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಶಿವಯೋಗಪ್ಪ ಎಮ್ಮಿ ವಹಿಸಿದ್ದರು. ಜಾನಪದ ತಜ್ಞ ಡಾ. ರಾಮು ಮೂಲಗಿ ಅವರು ಜಾನಪದ ಹಾಡುಗಳನ್ನು ಹಾಡಿದರು. ಪ್ರಮುಖರಾದ ವೀಣಾ ಬರಗಿ, ಮಂಜುಳಾ ಸೇಡದ, ವಕೀಲ ಕಲ್ಲಟ್ಟಿ, ಪರಮೇಶಪ್ಪ ಜಾಬಿನ್, ಡಾ. ಸುರೇಶ ಕಪಟಕರ, ರುದ್ರಪ್ಪ ಶಿರೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net